ರಾಷ್ಟ್ರೀಯ

ನೂರರ ಗಡಿ ಮುಟ್ಟಿದ ಟೊಮೆಟೋ ದರ!

Pinterest LinkedIn Tumblr


ನವದೆಹಲಿ [ಜು.17]: ಮಳೆ ಕೊರತೆ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಟೊಮೆಟೋ ಬೆಲೆ ಗಗನ ಮುಖಿಯಾಗಿದ್ದು, ರಾಜಧಾನಿ ದೆಹಲಿಯಲ್ಲಿ ಶತಕದ ಸಮೀಪ ಸಾಗಿದೆ.

ಮಂಗಳವಾರ ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೊಟೋ ಬೆಲೆ ಕೆಜಿಗೆ 60-80ರು.ವರೆಗೆ ತಲುಪಿದೆ.

ಪೂರೈಕೆಯಲ್ಲಿ ಕೊರತೆ ಮತ್ತು ಬೇಡಿಕೆ ಹೆಚ್ಚಳವಾಗಿದ್ದು ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟುಏರುವ ಭೀತಿ ಇದೆ.

Comments are closed.