ಕರ್ನಾಟಕ

ಬಾಡಿಗೆ ಮನೆಗೆ ಹಾನಿ ಪ್ರಕರಣಕ್ಕೆ ಸಂಬಂಧಿಸಿ ಯಶ್ ತಾಯಿ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ರದ್ದುಗೊಳಿಸಿದ ಹೈಕೋರ್ಟ್

Pinterest LinkedIn Tumblr

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್​​ ಬಾಡಿಗೆ ಮನೆ ಖಾಲಿ ಮಾಡುವಾಗ ಗೃಹ ಬಳಕೆ ವಸ್ತುಗಳನ್ನು ಹಾಳು ಮಾಡಿತ್ತು ,ಹಾಗೂ ಮನೆಗೆ ಹಾನೀಯನ್ನುಂಟು ಮಾಡಿದ್ದರು ಎಂದು ಆರೋಪಿಸಿ ಮನೆ ಮಾಲೀಕರು ದಾಖಲಿಸಿದ್ದ ಎಫ್​​ಐಆರ್​​ ನ್ನು ರದ್ದುಗೊಳಿಸಿ ಆದೇಶ ನೀಡಿದೆ.

ಮನೆಯ ಮಾಲೀಕರು ದಾಖಲಿಸಿದ ಎಫ್ಐಆರ್ ಪ್ರಶ‍್ನಿಸಿ ಯಶ್​​ ತಾಯಿ ಪುಷ್ಪಾ ಸಹ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಸೂಚಿಸಿದಂತೆ ಬಾಕಿ ಹಣ ಪಾವತಿಸಿ ಬಾಡಿಗೆ ಮನೆ ಖಾಲಿ ಮಾಡಿದ್ದೇವೆ. ಮನೆ ಖಾಲಿ ಮಾಡುವ ವೇಳೆ ಕೆಲವು ವಸ್ತುಗಳು ಸಣ್ಣಪುಟ್ಟ ಹಾನಿಗೀಡಾಗಿವೆ. ಇದಕ್ಕಾಗಿ ಪರಿಹಾರ ಕೋರಿರುವುದು ಎಷ್ಟು ಸರಿ ಎಂದು ನ್ಯಾಯಾಲಯದಲ್ಲಿ ಪುಷ್ಪಾ ಪ್ರಶ‍್ನಿಸಿದ್ದರು.

ಪ್ರಕರಣ ವಿಚಾರಣೆ ನಡೆಸಿದ ಹೈಕೋರ್ಟ್ ಪುಷ್ಪಾ ಅವರ ಮೇಲಿನ ಎಫ್​​ಐಆರ್​​ ನ್ನು ರದ್ದು ಮಾಡಿದೆ.

ಇನ್ನು ಅದೃಷ್ಟದ ಮನೆಯನ್ನು ಹೈಕೋರ್ಟ್ ಸೂಚನೆಯಂತೆ ಖಾಲಿ ಮಾಡಿದ್ದ ನಟ ಯಶ್ ಮನೆಯ ಕಬೋರ್ಡ್, ವಾಶ್ ಬೇಸಿನ್ ಸೇರಿ ಹಲವು ಸಾಮಗ್ರಿಗಳಿಗೆ ಹಾನಿ ಮಾಡಿದ್ದರು, ಕೆಲ ವಸ್ತುಗಳನ್ನು ಕಳವು ಮಾಡಿದ್ದರೆಂದು ಆರೋಪಿಸಿ ಮನೆ ಮಾಲೀಕರು ಗಿರಿನಗರ ಪೋಲೀಸರಲ್ಲಿ ದೂರು ದಾಖಲಿಸಿದ್ದರು.

Comments are closed.