ರಾಷ್ಟ್ರೀಯ

ಹ್ಯಾರಿ ಹೌದಿನಿ ಸ್ಟಂಟ್‌ ಮಾಡಲು ನದಿಗೆ ಧುಮುಕಿದ ಜಾದೂಗಾರ ಹೆಣವಾಗಿ ಪತ್ತೆ

Pinterest LinkedIn Tumblr

ಕೋಲ್ಕೊತಾ: ಸಂಪೂರ್ಣ ಬಂಧಿತರಾಗಿ ನೀರಿನೊಳಗೆ ಧುಮುಕಿ, ನೆರೆದವರು ನಿಬ್ಬೆರಗಾಗುವಂತೆ ಕ್ಷಣದಲ್ಲಿ ಬಂಧನ ಬಿಡಿಸಿಕೊಂಡು ನೀರಿನಿಂದ ಮೇಲೆಳುವ ಹ್ಯಾರಿ ಹೌದಿನಿ ಸ್ಟಂಟ್‌ ಮಾಡಲು ವಿಫಲವಾದ ಪಶ್ಚಿಮ ಬಂಗಾಳದ ಜಾದೂಗಾರ ಮಾಂಡ್ರೇಕ್‌ ಶವ ಕೊನೆಗೂ ಪತ್ತೆಯಾಗಿದೆ.

40 ವರ್ಷದ ಜಾದೂಗಾರ್‌ ಮಾಂಡ್ರೆಕ್‌ ಅಲಿಯಾಸ್‌ ಚಂಚಲ್‌ ಲಹಿರಿ ಹೂಗ್ಲಿ ನದಿಗೆ ತಮ್ಮ ಕೈಗಳು ಮತ್ತು ಕಾಲುಗಳಿಗೆ ಸರಪಳಿ ಬಿಗಿದುಕೊಂಡು ಸ್ಟಂಟ್‌ ತೋರಿಸುವುದಾಗಿ ಹೇಳಿ ಭಾನುವಾರ ಧುಮುಕಿದರು. ನಿಮಿಷದೊಳಗೆ ಬಂಧನ ಕಳಚಿ ನೀರಿನಿಂದ ಹೊರಬರಬೇಕಿದ್ದ ಲಹಿರಿ ಗಂಟೆ ಕಳೆದರೂ ಪತ್ತೆಯಾಗಲಿಲ್ಲ.

ಆಗಲೇ ನೆರೆದವರಿಗೆ ಲಹಿರಿ ಸಾವಿನ ಬಗ್ಗೆ ಶಂಕೆ ಮೂಡಿತ್ತು. ಪೊಲೀಸರಿಂದ ತೀವ್ರ ಹುಡುಕಾಟದ ಬಳಿಕ ಸೋಮವಾರ ನದಿಯಲ್ಲಿ ಲಹಿರಿ ಮೃತದೇಹ ಪತ್ತೆಯಾಯಿತು. 21 ವರ್ಷಗಳ ಹಿಂದೆ ಲಹಿರಿ ಕೋಲ್ಕೊತಾದ ಹೌರಾ ಸೇತುವೆಯಿಂದ ನೀರಿಗೆ ಧುಮುಕಿ ಇದೇ ಮಾದರಿ ಸ್ಟಂಟ್‌ ಮಾಡಿ, ಕೇವಲ 29 ಸೆಕೆಂಡ್‌ಗಳಲ್ಲಿ ಬಂಧನ ಕಳಚಿ ಮೇಲಕ್ಕೆ ಬಂದಿದ್ದರು.

Comments are closed.