ಕರ್ನಾಟಕ

ಎಟಿಎಂ ನಲ್ಲಿ ಹಣ ಡ್ರಾ ಮಾಡುವಾಗ ಎಚ್ಚರಿಕೆ ವಹಿಸಬೇಕಾದ ಮುಖ್ಯ ಅಂಶಗಳು

Pinterest LinkedIn Tumblr


ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಕಲಿ ಎಟಿಎಂ ಕಾರ್ಡ್ ಬಳಸಿ ಹಣ ಕದಿಯುವ ಪ್ರಕರಣಗಳು ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿವೆ. ಹಾಗಾಗಿ ಸಾಕಷ್ಟು ಮಂದಿ ಎಟಿಎಂ ನಲ್ಲಿ ಹಣ ಡ್ರಾ ಮಾಡುವಾಗ ಸಾಕಷ್ಟು ಜಾಗರೂಕರಾಗಿರುವುದು ಒಳ್ಳೆಯದು. ಆದಷ್ಟೂ ತಮ್ಮ ಎಟಿಎಂ ಕಾರ್ಡ್ ಗಳ ಮಾಹಿತಿಯನ್ನು ಗೌಪ್ಯವಾಗಿಡುವುದು ಸುರಕ್ಷಿತ. ಹಾಗಾಗಿ ಎಟಿಎಂ ನಲ್ಲಿ ಹಣ ಡ್ರಾ ಮಾಡುವಾಗ ಎಚ್ಚರಿಕೆ ವಹಿಸಬೇಕಾದ ಮುಖ್ಯ ಅಂಶಗಳು ಇಲ್ಲಿವೆ…

ಎಟಿಎಂ ನಲ್ಲಿ ಹಣ ಡ್ರಾ ಮಾಡುವಾಗ ಎಚ್ಚರಿಕೆ ವಹಿಸಬೇಕಾದ ಮುಖ್ಯ ಅಂಶಗಳು

1. ಬ್ಯಾಂಕಿನಿಂದ ಡೆಬಿಟ್ ಕಾರ್ಡ್ ಪಡೆದ ಕೂಡಲೇ ಅದರ ಹಿಂದೆ ನಿಮ್ಮ ಸಹಿ ಹಾಕಿ.

2. ನಿಮ್ಮ ಎಟಿಎಂ ಪಿನ್ ಅನ್ನು ನಿಯಮಿತವಾಗಿ ಬದಲಾಯಿಸಿ. ಹಾಗೆಯೇ ನಿಮ್ಮ ಡೆಬಿಟ್ ಕಾರ್ಡ್ ಮೇಲೆ ಯಾವುದೇ ಕಾರಣಕ್ಕೂ ನಿಮ್ಮ ಕಾರ್ಡ್ ಪಿನ್ ನಂಬರ್ ಬರೆಯಬೇಡಿ. ನೆನಪಿಟ್ಟುಕೊಳ್ಳಿ.

3. ನಿಮ್ಮ ಎಟಿಎಂ ಅಥವಾ ಡೆಬಿಟ್ ಕಾರ್ಡ್ ಪಿನ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

4. ಯಾವುದೇ ಎಟಿಎಂ ರೂಂ ಒಳಗೆ ಹಣ ಡ್ರಾ ಮಾಡುವಾಗ ಅಪರಿಚಿತರು ಒಳಗೆ ಬರದಂತೆ ನೋಡಿಕೊಳ್ಳಿ. ಹಾಗೆಯೇ ಅಪರಿಚಿತರ ಸಹಾಯ ಕೇಳಬೇಡಿ.

5. ಎಟಿಎಂ ಮೆಶೀನ್ ನಲ್ಲಿ ಹಣ ಡ್ರಾ ಮಾಡುವ ಅಥವಾ ಯಾವುದೇ ವಸ್ತು ಖರೀದಿಸುವಾಗ ಕಾರ್ಡ್ ಸ್ವೈಪ್ ಮಾಡುವ ಸಂದರ್ಭದಲ್ಲಿ ಪಿನ್ ಟೈಪ್ ಮಾಡುವಾಗ ಕೀಪ್ಯಾಡ್ ಮರೆಯಾಗಿಸಿ.

6. ನಿಮ್ಮ ಟ್ರ್ಯಾನ್ಸಾಕ್ಷನ್ ಸ್ಲಿಪ್ ಅನ್ನು ಎಟಿಎಂ ರೂಂ ಒಳಗೆ ಎಸೆಯಬೇಡಿ.

7. ಹಣ ಡ್ರಾ ಮಾಡಿದ ನಂತರ ಕೂಡಲೇ ನಿರ್ಗಮಿಸಬೇಡಿ. ಸ್ವಲ್ಪ ಹೊತ್ತು ಕಾದು ಟ್ರ್ಯಾನ್ಸಾಕ್ಷನ್ ಕಂಪ್ಲೀಟ್ ಆದ ನಂತರ ಹಸಿರು ಲೈಟ್ ಬರುವರೆಗೂ ಕಾಯಿರಿ.

8. ಯಾವುದೇ ಕಾರಣಕ್ಕೂ ಅನಧಿಕೃತ ಮಳಿಗೆಗಳಲ್ಲಿ ಕಾರ್ಡ್ ಸ್ವೈಪ್ ಮಾಡಬೇಡಿ.

9. ಒಂದು ವೇಳೆ ಎಟಿಎಂ ಕಾರ್ಡ್ ಕಳೆದು ಹೋದಲ್ಲಿ ಕೂಡಲೇ ನಿಮ್ಮ ಬ್ಯಾಂಕಿನ ಗ್ರಾಹಕ ಸೇವೆಗೆ ಕರೆ ಮಾಡಿ ನಿಮ್ಮ ಕಾರ್ಡ್ ಬ್ಲಾಕ್ ಮಾಡಿಸಿ.

10. ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸವನ್ನು ಮರೆಯದೇ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ನೀಡಿ. ಇದರಿಂದ ನಿಮ್ಮ ಡೆಬಿಟ್ ಕಾರ್ಡಿನ ಪ್ರತಿಯೊಂದು ಟ್ರ್ಯಾನ್ಸಾಕ್ಷನ್ ವಿವರ ತಿಳಿಯಬಹುದು.

Comments are closed.