ರಾಷ್ಟ್ರೀಯ

ಮೊಬೈಲ್‌ ಫೋನ್‌ ಕಿತ್ತುಕೊಂಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿಡಿಯೋ ಗೇಮ್‌ ವ್ಯಸನಿಯಾಗಿದ್ದ ಬಾಲಕಿ!

Pinterest LinkedIn Tumblr


ನಾಗಪುರ: ಅಮ್ಮ ಮೊಬೈಲ್‌ ಫೋನ್‌ ಕಿತ್ತುಕೊಂಡಿದ್ದಕ್ಕೆ ವಿಡಿಯೋ ಗೇಮ್‌ ವ್ಯಸನಿಯಾಗಿದ್ದ 14 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ.

ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದ ಕ್ರಿಶ್‌ ಸುನಿಲ್‌ ಲುನಾವತ್‌ ಎಂಬಾತ ಗಂಟೆಗಟ್ಟಲೆ ಮೊಬೈಲ್‌ ಫೋನ್‌ ಬಳಸುತ್ತಿದ್ದ. ಅಲ್ಲದೆ ವಿಡಿಯೋ ಗೇಮ್‌ಗೆ ಅಡಿಕ್ಟ್‌ ಆಗಿದ್ದ. ಕಳೆದ ಕೆಲ ದಿನಗಳಿಂದ ಶಾಲೆಗೆ ಹೋಗುವುದನ್ನು ಕೂಡ ನಿಲ್ಲಿಸಿದ್ದ ಎಂದು ಇನ್ಸ್‌ಪೆಕ್ಟರ್‌ ಉಮೇಶ್‌ ಬೇಸರ್ಕಾರ್‌ ತಿಳಿಸಿದ್ದಾರೆ.

ಆತನ ತಾಯಿ ಮತ್ತು ಅಕ್ಕ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಒಬ್ಬನೇ ಇರುತ್ತಿದ್ದ ಬಾಲಕ ಯಾವಾಗಲೂ ಮೊಬೈಲ್‌ ಬಳಕೆಯಲ್ಲಿಯೇ ಇರುತ್ತಿದ್ದ. ಇತ್ತೀಚೆಗಷ್ಟೇ ಪ್ಲೇಸ್ಟೇಷನ್‌ ಗೇಮಿಂಗ್‌ ಸಾಧನವನ್ನು ಕೊಡಿಸುವಂತೆ ತನ್ನ ತಾಯಿಯನ್ನು ಬಲವಂತ ಮಾಡಿದ್ದ. ಕ್ರಿಶ್‌ ತಾಯಿ ಮುಂಬೈಗೆ ತೆರಳಬೇಕಿದ್ದರಿಂದಾಗಿ ಮೊಬೈಲ್‌ ಫೋನ್‌ ಕೇಳಿದ್ದರು ಆತ ನಿರಾಕರಿಸಿದಾಗ ಕಸಿದುಕೊಂಡು ಮುಂಬೈಗೆ ತೆರಳಿದ್ದಾರೆ. ಇದರಿಂದ ಕೋಪಗೊಂಡ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಂಜೆ ಆತನ ಅಕ್ಕ ಮನೆಗೆ ಹಿಂತಿರುಗಿದಾಗ ತಮ್ಮ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.