ಕರ್ನಾಟಕ

ಮುಖ್ಯಮಂತ್ರಿ ಹಣವನ್ನೆಲ್ಲಾ ಸ್ಪೆಷಲ್ ವಿಮಾನದಲ್ಲಿ ಹೈಕಮಾಂಡ್‌ಗೆ ಕಳಿಸ್ತಾರೆ: ಕುಮಾರಸ್ವಾಮಿ

Pinterest LinkedIn Tumblr

ಕಲಬುರಗಿ: ಸಿಎಂ ಸಿದ್ದರಾಮಯ್ಯ ಚೆಕ್​ ಮೂಲಕ ಹಣ ತೆಗೆದುಕೊಳ್ಳುವುದಿಲ್ಲ. ಕೃಷ್ಣ, ರಾಮನ ಲೆಕ್ಕದಲ್ಲಿ ತೆಗೆದುಕೊಳ್ಳುತ್ತಾರೆ. ಹಣವನ್ನೆಲ್ಲಾ ಸ್ಪೆಷಲ್ ವಿಮಾನದಲ್ಲಿ ಹೈಕಮಾಂಡ್‌ಗೆ ಕಳಿಸ್ತಾರೆ. ಇದಕ್ಕೆ ಅಂಥ ನಾಲ್ಕು ಜ‌ನ ಸಚಿವರಿದ್ದಾರೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಕಲಬುರಗಿಯಲ್ಲಿ ಮಾತನಾಡಿದ ಅವರು ನೀರಾವರಿ ಇಲಾಖೆಯಲ್ಲಿ ನಡೆದಿರುವ ಲೂಟಿ ಚುನಾವಣೆ ಬಳಿಕ ಹೊರ ಬರಲಿದೆ. ಸಿಎಂ ಮಾತನಾಡುವುದೆಲ್ಲಾ ಸಂತೆ ಭಾಷಣ. ಅವರ ಘನತೆಗೆ ತಕ್ಕ ಹಾಗೇ ದೇಹ ಭಾಷೆ ಇಲ್ಲ ಎಂದು ಕಿಡಿಕಾರಿದ್ದಾರೆ.

ಸಿಎಂ ಹಿಂದುತ್ವ, ಜ್ಯಾತ್ಯಾತೀತವಾದ ಮೇಲೆ ಚುನಾವಣೆಗೆ ಹೊರಟರೆ, ಅಮಿತ್‌ ಷಾ ರಾಜಕೀಯ ವ್ಯಾಪಾರೀಕರಣದ ಹೆಸರಲ್ಲಿ ಚುನಾವಣೆಗೆ ಹೊರಟಿದ್ದಾರೆ. ಆದರೆ, ನಾವು ರಾಜ್ಯದ ಅಭಿವೃದ್ಧಿ, ಜನರ ಹಿತದೃಷ್ಟಿ ಇಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ ಎಂದರು.

ಅನಂತ ಕುಮಾರ್‌ ಹೆಗಡೆ 2ನೇ ಕೆಟಗರಿಗೆ ಸೇರಿದವ
ಕೆಲಸ‌ ಮಾಡದ ರಾಜಕಾರಣಿಗಳು ನಾಲಾಯಕ್ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸದ ಅವರು 6 ಬಾರಿ ಸಂಸದರಾದವರು ತಮ್ಮ ಕ್ಷೇತ್ರದಲ್ಲಿ ಏನು ಕೆಲಸ ಮಾಡಿದ್ದಾರೆ? ಹಾಗಾದರೆ ಇವರೇನು ನಾಲಾಯಕಾ? ರಾಜಕೀಯದಲ್ಲಿ ಅವರು 2ನೇ ಕೆಟಗರಿಗೆ ಸೇರಿದವರು. ವಾಮ ಮಾರ್ಗದಲ್ಲಿ ಜನರನ್ನು ಸೆಳೆಯಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

Comments are closed.