
ಥಾಣೆ: ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆಯೊಬ್ಬಳು 13 ವರ್ಷಗಳ ಹಿಂದೆ ಪತಿಯನ್ನು ಕೊಲೆಗೈದು ಮನೆಯಲ್ಲಿಯೇ ಹೂತು ಹಾಕಿದ್ದ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರು ಭೇದಿಸಿದ್ದಾರೆ.
ವೇಶ್ಯಾವಾಟಿಕೆ ಪ್ರಕರಣದಲ್ಲಿ ಮಹಿಳೆಯನ್ನು ಬಂಧಿಸಿದ ಪಾಲ್ಘರ್ ಗ್ರಾಮೀಣ ಪೊಲೀಸರು, ಬಂಧಿತ ಮಹಿಳೆಯ ಮನೆಯಲ್ಲಿ ಆಸ್ಥಿಪಂಜರವನ್ನು ಪತ್ತೆ ಮಾಡಿದ್ದಾರೆ. ಈ ಕುರಿತು ಮಹಿಳೆಯನ್ನು ವಿಚಾರಣೆಗೊಳಪಡಿಸಿದಾಗ 13 ವರ್ಷಗಳ ಹಿಂದೆ ತಾನೇ ಪತಿಯನ್ನು ಕೊಲೈಗೈದು ಮನೆಯಲ್ಲಿ ಹೂತಿರುವುದಾಗಿ ಒಪ್ಪಿಕೊಂಡಿದ್ದಾಳೆ.
‘ಇಲ್ಲಿನ ದಂಡಿಪಾದ ಪ್ರದೇಶದಲ್ಲಿರುವ ಸರಿತಾ ಭಾರ್ತಿ (37) ಎಂಬುವವಳ ಮನೆಯ ಮೇಲೆ ದಾಳಿ ನಡೆಸಿದ್ದು, ನಾಲ್ವರು ಮಹಿಳೆಯರನ್ನು ವೇಶ್ಯಾವಾಟಿಕೆ ಕೂಪದಿಂದ ಪಾರು ಮಾಡಿರುವುದಾಗಿ’ ಪೊಲೀಸ್ ಉಪ ಅಧೀಕ್ಷಕ ಫತೇಸಿಂಗ್ ಪಾಟೀಲ್ ತಿಳಿಸಿದ್ದಾರೆ.
‘ಸರಿತಿ ಭಾರ್ತಿ 13 ವರ್ಷಗಳ ಹಿಂದೆ ತನ್ನ ಪತಿ ಸಹದೇವ್ ಅವರನ್ನು ಕೊಂದು ಅದೇ ಮನೆಯಲ್ಲಿ ಹೂತಿದ್ದಳು ಎಂಬ ಆಘಾತಕಾರಿ ವಿಷಯ ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿದೆ.
ತನಿಖೆ ವೇಳೆ ಪತ್ತೆಯಾದ ಆಸ್ಥಿಪಂಜರವನ್ನು ಪ್ರಯೋಗಾಲಯಕ್ಕೆ ಕಳುಹಿಸಿದೆ. ಈ ಕುರಿತು ಮತಷ್ಟು ತನಿಖೆ ನಡೆಯಬೇಕಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Comments are closed.