ರಾಷ್ಟ್ರೀಯ

ಜಾಧವ್‌ ಪ್ರಕರಣ: ಡಿ.25ರಂದು ತಾಯಿ ಹಾಗೂ ಪತ್ನಿ ಭೇಟಿಗೆ ಅವಕಾಶ

Pinterest LinkedIn Tumblr


ಹೊಸದಿಲ್ಲಿ: ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾ ಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಭೇಟಿಗೆ ಪತ್ನಿ ಹಾಗೂ ತಾಯಿಗೆ ಪಾಕ್‌ ಸರ್ಕಾರ ಅವಕಾಶ ನೀಡಿದೆ.

ಪಾಕಿಸ್ತಾನದ ವಿದೇಶಾಂಗ ವ್ಯವಹಾರ ವಕ್ತಾರ ಮೊಹಮ್ಮದ್‌ ಫೈಸೆಲ್‌ ಪಿಟಿಐಗೆ ನೀಡಿದ ಪ್ರತಿಕ್ರಿಯೆ ಪ್ರಕಾರ, ಪಾಕ್‌ ಸರಕಾರ ಜಾಧವ್‌ ಅವರ ಪತ್ನಿ ಹಾಗೂ ತಾಯಿಗೆ ಇದೇ ತಿಂಗಳ 25ರಂದು ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಇದೇ ಸಂದರ್ಭದಲ್ಲಿ ಭಾರತೀಯ ಉನ್ನತ ಆಯೋಗದ ಅಧಿಕಾರಿಗಳಿಗೂ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ.

ಕಳೆದ ಬಾರಿ ಪಾಕ್‌ ಜಾಧವ್‌ ಪತ್ನಿ ಹಾಗೂ ತಾಯಿಗೆ ಭೇಟಿ ನೀಡಲು ಅವಕಾಶ ನೀಡಿತ್ತು, ಆದರೆ ಭೇಟಿ ವೇಳೆ ಕುಲಭೂಷಣ್ ಪತ್ನಿ ಮತ್ತು ತಾಯಿಗೆ ವಿಚಾರಣೆ ನೆಪದಲ್ಲಿ ಕಿರುಕುಳ ಕೊಡುವುದಿಲ್ಲವೆಂಬುದನ್ನು ಖಾತರಿಪಡಿಬೇಕೆಂದು ಭಾರತ ಪಾಕಿಸ್ತಾನವನ್ನು ಕೇಳಿಕೊಂಡಿತ್ತು. ಹೀಗಾಗಿ ಈ ಬಾರಿ ಜಾಧವ್‌ ಪತ್ನಿ ಹಾಗೂ ಅವರ ತಾಯಿಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಅವಕಾಶ ಕಲ್ಪಿಸುವುದಾಗಿ ಹೇಳಿದೆ.

ಕಳೆದ ಏಪ್ರಿಲ್ ನಲ್ಲಿ ಗೂಢಾಚಾರಿಕೆ ಮಾಡಿದ ಆರೋಪದ ಮೇಲೆ ಪಾಕಿಸ್ತಾನ ಸೇನಾ ಕೋರ್ಟ್ ಜಾಧವ್ ಗೆ ಗಲ್ಲು ಶಿಕ್ಷೆ ವಿಧಿಸಿದ್ದು, ಅದಕ್ಕೆ ಅಂತರಾಷ್ಟ್ರೀಯ ಕೋರ್ಟ್ ತಡೆ ನೀಡಿದೆ.

Comments are closed.