ಕರ್ನಾಟಕ

ಕೊಡಗಿನ ರೆಸಾರ್ಟ್‍ನಲ್ಲಿ ಹೊಸ ನೋಟಿನ 35 ಲಕ್ಷ ರೂ. ವಶ

Pinterest LinkedIn Tumblr

notes21ಕೊಡಗು: ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ರೆಸಾರ್ಟ್ ಒಂದರಲ್ಲಿ ದಾಖಲೆಯಿಲ್ಲದ ಹೊಸ ನೋಟನ 35 ಲಕ್ಷ ಹಣವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಖಾಸಗಿ ರೆಸಾರ್ಟ್‍ನಲ್ಲಿ ಕಮಿಷನ್ ದಂಧೆಯಲ್ಲಿ ತೊಡಗಿದ್ದ ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಶುಂಟಿಕೊಪ್ಪ ಸಮೀಪದ ಹೊಸಕೋಟೆಯ ಖಾಸಗಿ ರೆಸಾರ್ಟ್‍ನಲ್ಲಿ ಕಮಿಷನ್ ದಂಧೆಯಲ್ಲಿ ತೊಡಗಿದ್ದ ಶನಿವಾರಸಂತೆಯ ಅನಂತ್ ಕುಮಾರ್, ಕುಶಾಲನಗರದ ಜಮೀಲ್ ಹಾಗು ಶ್ರೀಧರ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸರ ದಾಳಿಯಲ್ಲಿ 35 ಲಕ್ಷದ 46 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. 34 ಲಕ್ಷದ 40 ಸಾವಿರ ಹೊಸ 2 ಸಾವಿರ ಮೌಲ್ಯದ ಕರೆನ್ಸಿಯಾಗಿದೆ. 100 ರೂ ಮುಖಬೆಲೆಯ 96 ಸಾವಿರ, 50 ರೂ ಮುಖಬೆಲೆಯ 10 ಸಾವಿರ ರೂ. ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಆಗಮಿಸಿದ್ದಾರೆ.

Comments are closed.