ಮುಂಬೈ

ಮಾರುಕಟ್ಟೆಯಿಂದ 78 ಕಂಪೆನಿಗಳು ನಾಪತ್ತೆ!

Pinterest LinkedIn Tumblr

sensex-2ಮುಂಬೈ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆದಾರರಿಂದ ಕೋಟ್ಯಂತರ ರೂಪಾಯಿ ಸಂಗ್ರಹ ಮಾಡಿದ್ದ 78 ಕಂಪನಿಗಳು ನಾಪತ್ತೆಯಾಗಿವೆ. ಕಣ್ಮರೆಯಾಗಿರುವ 78 ಕಂಪನಿಗಳಿಂದ ಒಟ್ಟು ಸಂಗ್ರಹವಾಗಿರುವ ಬಂಡವಾಳ 32 ಕೋಟಿ ರೂಪಾಯಿಗಳಾಗಿದ್ದು ಈ ಪೈಕಿ ಅತಿ ಹೆಚ್ಚು ಅಂದರೆ 17 ಕಂಪನಿಗಳು ಗುಜರಾತ್ ನದ್ದಾಗಿವೆ.
ಷೇರುಮಾರುಕಟ್ಟೆಯಲ್ಲಿ ವ್ಯವಹಾರ ನಡೆಸುವ ಸಂಬಂಧ ಬಂಡವಾಳ ಹೂಡಿಕೆ ಪ್ರಕ್ರಿಯೆ ಬಳಿಕ ಈ ಸಂಸ್ಥೆಗಳು ಅಧಿಕೃತ ದಾಖಲೆಗಳನ್ನು ಮತ್ತು ಬ್ಯಾಲೆನ್ಸ್ ಶೀಟ್ ಸಲ್ಲಿಸುವಲ್ಲಿ ವಿಫಲವಾಗಿದ್ದವು. ಇದೀಗ ಈ ಸಂಸ್ಥೆಗಳು ಷೇರುಮಾರುಕಟ್ಟೆ ವ್ಯವಹಾರದಿಂದ ನಾಪತ್ತೆಯಾಗಿವೆ ಎಂದು ತಿಳಿದುಬಂದಿದ್ದು ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಒಡಿಶಾ, ಪಂಜಾಬ್ ತಮಿಳುನಾಡು ಮೂಲದ ಸಂಸ್ಥೆಗಳೂ ಕಣ್ಮರೆಯಾಗಿರುವ ಕಂಪನಿಗಳ ಪಟ್ಟಿಯಲ್ಲಿವೆ.
78 ಕಂಪನಿಗಳ ಪೈಕಿ ಆಂಧ್ರಪ್ರದೇಶದ 13, ತಮಿಳುನಾಡಿನ 10, ಮಹಾರಾಷ್ಟ್ರದ 9, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ದೆಹಲಿಯಿಂದ ತಲಾ 5 ಕಂಪನಿಗಳಿವೆ. ಈ ಹಿಂದೆ ಬಂಡವಾಳ ಹೂಡಿಕೆ ಮೂಲಕ ಹಣ ಸಂಗ್ರಹ ಮಾಡಿದ್ದ ಒಟ್ಟು 238 ಕಂಪನಿಗಳನ್ನು ಕಣ್ಮರೆಯಾಗಿವೆ ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಗುರುತಿಸಿತ್ತು. ಆದರೆ ನಂತರದ ದಿನಗಳಲ್ಲಿ 160 ಕಂಪನಿಗಳನ್ನು ಪತ್ತೆ ಮಾಡಿದ್ದರಿಂದ ಅವುಗಳನ್ನು ಕಣ್ಮರೆಯಾಗಿರುವ ಕಂಪನಿಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ತಿಳಿಸಿದ್ದಾರೆ.
ಇವೆಲ್ಲದರ ಹೊರತಾಗಿ 185 ಕಂಪನಿಗಳ ವಿರುದ್ಧ ಸೀರಿಯಸ್ ಫ್ರಾಡ್ ಇನ್ವೆಸ್ಟಿಗೇಷನ್ ಆಫೀಸ್ (SFIO) ಕಚೇರಿ ಮೂಲಕವಾಗಿ ತನಿಖೆ ನಡೆಸಲಾಗುತ್ತಿದ್ದು, ಈ ಕಂಪನಿಗಳು ಕಳೆದ ಮೂರು ವರ್ಷಗಳ ಕಾಲ ನಡೆಸಿರುವ ವಹಿವಾಟಿನ ಕುರಿತು ಶೋಧ ನಡೆಸಲಾಗುತ್ತಿದೆ. ಈ ಪೈಕಿ 24 ಕಂಪನಿಗಳು ಕಾನೂನು ಬಾಹಿರವಾಗಿ ಈಗಲೂ ಚಿಟ್ ಫಂಡ್, ಪಾಂಜಿ ಮತ್ತು ಮಲ್ಚಿಲೆವಲ್ ಮಾರ್ಕೆಟಿಂಗ್ ಮಾಡುತ್ತಿವೆ, ಈ ಕಂಪನಿಗಳ ವಿರುದ್ಧವೂ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

Comments are closed.