ಮನೋರಂಜನೆ

2017ರ ಅಂತ್ಯಕ್ಕೆ ಅನುಷ್ಕಾ ಮದುವೆ?

Pinterest LinkedIn Tumblr

anushka-story_647_083115052730ಬೆಂಗಳೂರು, ಡಿ 3- ಬಾಹುಬಲಿ ಸರಣಿ ಚಿತ್ರದಲ್ಲಿ ತೊಡಗಿಸಿಕೊಂಡಿದ ಬಹುಭಾಷ ನಟಿ ಅನುಷ್ಕಾ ಶೆಟ್ಟಿ ಕನ್ನಡಿಗನೊಂದಿಗೆ ಮುಂದಿನ ವರ್ಷ ಅಂತ್ಯಕ್ಕೆ ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬಾಹುಬಲಿ-2 ನಂತರ ಚಿತ್ರದ ನಾಯಕ ಪ್ರಭಾಸ್ ಮದುವೆ ಆಗುವ ಯೋಜನೆ ಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಆ ಚಿತ್ರದ ನಾಯಕಿ ಅನುಷ್ಕಾ ಕೂಡಾ ಮದುವೆಗೆ ಪ್ಲ್ಯಾನ್ ಮಾಡ್ತಿದ್ದಾರೆ ಎಂದು ತಿಳಿದು ಬಂದಿದೆ.
ಅನುಷ್ಕಾ ಶೆಟ್ಟಿ ಮೂಲತ ಕನ್ನಡತಿಯಾದರೂ ಕನ್ನಡದ ಯಾವುದೊಂದು ಚಿತ್ರದಲ್ಲಿ ನಟಿಸದೇ, ತೆಲುಗು, ತಮಿಳು ಚಿತ್ರರಂಗದಲ್ಲಿ ಭಾರೀ ಪ್ರಸಿದ್ದಿ ಹೊಂದಿದ್ದಾರೆ. 36 ವರ್ಷದ ಈ ನಟಿ ಇದೀಗ ಮದುವೆಯಾಗಲು ಯೋಜಿಸಿದ್ದಾರೆ. ಈವರೆಗೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಅನುಷ್ಕಾ ಮದುವೆಗೆ ಹಸಿರು ನಿಶಾನೆ ನೀಡುತ್ತಿದ್ದಂತೆ ಮನೆಯವರು ಆಕೆಗಾಗಿ ಗಂಡು ಹುಡುಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದವರೇ ಆದ ಓರ್ವ ಉದ್ಯಮಿ ಜೊತೆ ಅನುಷ್ಕಾ ಮದುವೆ ಫಿಕ್ಸ್ ಆಗಿದೆ ಅಂತೆ, ಉದ್ಯಮಿಗೆ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣಗಳಲ್ಲಿ ದೊಡ್ಡ ಉದ್ದಿಮೆಗಳಿದ್ದು ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ. ಅಂತೆಯೇ ಇವರಿಬ್ಬರ ಮದುವೆ 2017ರ ಅಂತ್ಯದಲ್ಲಿ ನೆರವೇರಲಿದೆಯಂತೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹೀಗಾಗಿ ಅನುಷ್ಕಾ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸಿ ಮದುವೆ ಹೊತ್ತಿಗೆ ಆರಾಮಾಗಿರಲು ಯೋಚಿಸಿದ್ದಾರೆ ಹಾಗೂ ಮದುವೆ ನಂತರ ಸಿನಿಮಾಗಳಿಗೆ ಗುಡ್‍ಬೈ ಹೇಳಲು ಅನುಷ್ಕಾ ನಿರ್ಧರಿಸಿದ್ದಾರೆ ಎಂದು ಕೇಳಿ ಬಂದಿದೆ.

Comments are closed.