ಕರ್ನಾಟಕ

82ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ‘ಫ್ಲೆಕ್ಸ್’ ಕುರಿತು ಭಾರೀ ಚರ್ಚೆ

Pinterest LinkedIn Tumblr

banner-finalರಾಯಚೂರು: ಇಲ್ಲಿ ನಡೆಯುತ್ತಿರುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಕಾಣಿಸಿಕೊಂಡಿರುವ ಫ್ಲೆಕ್ಸ್’ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಸಾಹಿತ್ಯ ಸಮ್ಮೇಳನದ ಆವರಣದಲ್ಲಿದ್ದ ಫ್ಲೆಕ್ಸ್ ವೊಂದರಲ್ಲಿ ಸರ್ವಜ್ಞನ ವಚನವನ್ನು ತಿರುಚಿ ಬರೆದದ್ದು ವಿವಾದಕ್ಕೆ ನಾಂದಿ ಹಾಡಿದೆ.

ಫ್ಲೆಕ್ಸ್ ನಲ್ಲಿ ಏನಿದೆ?
ವಾಸಕ್ಕೆ ಆಶ್ರಯ ಮನೆ ಇರಲು
ರೂಪಾಯಿಗೊಂದು ಕೆ.ಜಿ ಅಕ್ಕಿ ಸಿಗುತಿರಲು
ರಾತ್ರಿ ನಶೆಗೆ ಅಗ್ಗದ ಮಧ್ಯವಿರಲು
ಕೂಲಿ ಕೆಲಸಕ್ಕೆ ಬೆಂಕಿ ಹಂಚ್ಚೆಂದ ಸರ್ವಜ್ಞ
-ಸರ್ವಜ್ಞ

ಈ ರೀತಿ ಸರ್ವಜ್ಞನ ವಚನವನ್ನು ತಿರುಚಿ ಬರೆಯಲಾಗಿದೆ.

ಎಲ್ಲಿತ್ತು ಫ್ಲೆಕ್ಸ್?
ಸಮ್ಮೇಳನದ ಪ್ರಧಾನ ವೇದಿಕೆಯ ಹಿಂಭಾಗದಲ್ಲಿ ಸಮಾನಾಂತರ ವೇದಿಕೆಗೆ ಹೋಗುವ ರಸ್ತೆಯಲ್ಲಿ ಬರುವ ವೃತ್ತದ ಎಡಭಾಗದ ತಿರುವಿನಲ್ಲಿರುವ ಬೇಲಿಯ ಬಳಿ ಈ ಫ್ಲೆಕ್ಸ್ ಕಂಡು ಬಂದಿತ್ತು. ಶನಿವಾರ ಬೆಳಗ್ಗೆ 8.30ರ ವರೆಗೆ ಆ ಫ್ಲೆಕ್ಸ್ ಅಲ್ಲಿಯೇ ಇತ್ತು. ಫ್ಲೆಕ್ಸ್ ಬರಹದ ಬಗ್ಗೆ ಸುದ್ದಿ ಹಬ್ಬುತ್ತಿದ್ದಂತೆ ಅದನ್ನು ಅಲ್ಲಿಂದ ತೆರವುಗೊಳಿಸಲಾಗಿದೆ.

Comments are closed.