ಕರ್ನಾಟಕ

ಬಂದ್‍ಗೆ ಬೆಂಬಲ ನೀಡದ ಕನ್ನಡಿಗರ ಮೇಲೆ ಕೇರಳದಲ್ಲಿ ಹಲ್ಲೆ!

Pinterest LinkedIn Tumblr

Bharath-Bandh-600ಮೈಸೂರು: ಮೋದಿ ಸರ್ಕಾರದ ನೋಟ್ ಬ್ಯಾನ್ ವಿರೋಧಿಸಿ ಇಂದು ದೇಶಾದ್ಯಂತ ಬಂದ್‍ಗೆ ವಿಪಕ್ಷಗಳು ಕರೆನೀಡಿವೆ. ಆದ್ರೆ ಕರ್ನಾಟಕದಲ್ಲಿ ಬಂದ್‍ಗೆ ಬೆಂಬಲ ನೀಡದಿರುವುದಕ್ಕೆ ಕೆರಳಿದ ಕೇರಳಿಗರು ಕನ್ನಡಿಗರ ಮೇಲೆ ಹಲ್ಲೆ ನಡೆಸಿದ್ದಾರೆ.

ಮೈಸೂರು ಮೂಲದ ಶಿವಪ್ರಕಾಶ್ ಮತ್ತು ಗೆಳೆಯರು ಇಂದು ಕೇರಳದ ವಯನಾಡಿನ ಕುಲುಪಲಿಗೆ ಹೋಗಿ ಹಿಂತಿರುಗುವ ಸಂದರ್ಭದಲ್ಲಿ ಕೇರಳಿಗರು ಇವರ ಮೇಲೆ ಹಲ್ಲೆ ನಡೆಸಿದ್ದಾರೆ.

ಪ್ರತಿಭಟನಾ ನಿರತ ಕೆರಳಿಗರು ಮೈಸೂರಿಗೆ ಬರುವ ಮಾರ್ಗದಲ್ಲಿ ಕಾರು ಅಡ್ಡಗಟ್ಟಿ ಕನ್ನಡಿಗರನ್ನು ಥಳಿಸುವ ಮೂಲಕ ಕರ್ನಾಟಕದಲ್ಲಿ ನೋಟ್ ಬ್ಯಾನ್ ವಿರೋಧಿಸಿ ಬಂದ್ ಆಗದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ರೆ ವಿಪರ್ಯಾಸವೆಂದರೆ ಕೇರಳ ಪೊಲೀಸರು ಮಾತ್ರ ಹಲ್ಲೆ ನೋಡಿಕೊಂಡು ಮೂಕಪ್ರೇಕ್ಷಕರಾಗಿ ನಿಂತಿದ್ದಾರೆ.

Comments are closed.