ರಾಷ್ಟ್ರೀಯ

ಕಾರ್ ಬೆಲೆಯಲ್ಲೇ ಹೆಲಿಕಾಪ್ಟರ್

Pinterest LinkedIn Tumblr

helicapterನವದೆಹಲಿ: ಐಷಾರಾಮಿ ಕಾರುಗಳಲ್ಲಿ ತಿರುಗಾಡುವವರು ಇನ್ನು ಮುಂದೆ ಹೆಲಿಕಾಪ್ಟರ್‍ಗಲ್ಲಿ ಸಂಚರಿಸಬಹುದು. ದುಬಾರಿ ಕಾರುಗಳ ಬೆಲೆಯಲ್ಲಿ ಹೊಸ ಬಗೆಯ ಹೆಲಿಕಾಪ್ಟರ್‍ಗಳು ಸದ್ಯದಲ್ಲೇ ಮಾರುಕಟ್ಟೆಗೆ ಬರಲಿವೆ.

ಹೌದು. ಭಾರತದಲ್ಲೇ ಪ್ರಥಮ ಬಾರಿಗೆ ಕೇವಲ ಎರಡು ಸೀಟ್ ಸಾಮರ್ಥ್ಯ ಹೊಂದಿರುವ ಹೆಲಿಕಾಪ್ಟರನ್ನು ಖಾಸಗಿ ಕಂಪನಿಯೊಂದು ಅಭಿವೃದ್ಧಿ ಪಡಿಸಿದೆ. ಗುರಗಾಂವ್ ಮೂಲದ ಕಂಪನಿಯೊಂದು ಅರಾವಳಿ ಪರ್ವತ ಶ್ರೇಣಿಯಲ್ಲಿ ಪ್ರಾಯೋಗಿಕ ಹಾರಾಟ ನಡೆಸಲು ಸಜ್ಜಾಗಿದೆ.

ಭಾರತದಲ್ಲಿ ಪ್ರಥಮ ಬಾರಿಗೆ ಈ ತರಹದ ಹೆಲಿಕಾಪ್ಟರ್‍ನ್ನು ಅಭಿವೃದ್ಧಿ ಪಡಿಸಿದ್ದು, ಇದರ ಬೆಲೆ 1.5ಕೋಟಿ ರೂ. ಇದ್ದು, ಅತಿ ಕಡಿಮೆ ಬೆಲೆಯಲ್ಲಿ ಇದು ಗ್ರಾಹಕರಿಗೆ ದೊರೆಯಲಿದೆ ಎಂದು ಕಂಪನಿಯ ಅಧಿಕಾರಿ ವಿವೇಕ್ ತಿಳಿಸಿದ್ದಾರೆ.

ಪೋಲಂಡ್‍ನಲ್ಲಿ ಬಳಸಲಾದ ತಂತ್ರಜ್ಞಾನವನ್ನು ನಾವು ಬಳಸಿದ್ದು, ಹೆಲಿಕಾಪ್ಟರ್‍ನ 135 ಅಶ್ವಶಕ್ತಿ ಸಾಮರ್ಥ್ಯದ ರೋಟೆಕ್ಸ್ 92 ಯುಎಲ್‍ಎಸ್ ಎಂಜಿನ್ ಹೊಂದಿದೆ. ಮುಂದಿನ ದಿನಗಳಲ್ಲಿ ದೇಶದ ಮತ್ತು ವಿದೇಶಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಹೆಲಿಕಾಪ್ಟರ್‍ಗಳನ್ನು ತಯಾರಿಸಲಾಗುವುದು. ನವೆಂಬರ್ 23 ರಿಂದ 26ರವರೆಗೆ ಕಂಪೆನಿ ಹೆಲಿಕಾಪ್ಟರ್ ಡೆಮೋ ಹಾರಾಟವನ್ನು ನಡೆಸಿದ್ದು ಮತ್ತೆ ಜನವರಿ 12ರ ನಂತರ ಮತ್ತೊಂದು ಸುತ್ತಿನ ಡೆಮೋದ ಹಾರಾಟವನ್ನು ನೀಡಲಿದೆ ಎಂದು ಕಂಪೆನಿ ತಿಳಿಸಿದೆ.

ನಿಷೇಧಿತ ಪ್ರದೇಶದಲ್ಲಿ ಉತ್ಪಾದನೆ: ಅರಾವಳಿ ಪರ್ವತ ಶ್ರೇಣಿಯ ಹಸಿರು ಘಟ್ಟದಲ್ಲಿ ಹೆಲಿಕಾಪ್ಟಾರ್‍ಗಳನ್ನು ತಯಾರಿಸುತ್ತಿದೆ. ಈ ಪ್ರದೇಶದಲ್ಲಿ ಕಾಡು ಪ್ರಾಣಿಗಳಾದ ಕತ್ತೆ ಕಿರುಬ, ಚಿರತೆ ಮುಂತಾದ ಪ್ರಾಣಿಗಳು ಈ ಸ್ಥಳದಲ್ಲಿ ವಾಸಿಸುತ್ತಿವೆ. ಈ ಪ್ರದೇಶವು ದೇಶದ ರಕ್ಷಣಾ ಸಂಸ್ಥೆಗಳಾದ ಗಳಾದ ಮೊಹಮ್ಮದಪುರನ ಐಎಎಫ್ ಡಿಪೋ ಮತ್ತು ಮನೇಸೆರ್ ಎನ್‍ಎಸ್‍ಜಿ ಕ್ಯಾಂಪ್‍ಗಳಿಂದ ಕೇವಲ 2ರಿಂದ 8ಕಿ.ಮೀ. ದೂರದಲ್ಲಿದೆ.

ಈ ಕಂಪನಿಯು ಹೆಲಿಕಾಪ್ಟರ್ ಲ್ಯಾಂಡ್ ಆಗಲು ಮತ್ತು ಫಾರ್ಮ ಹೌಸ್ ನಿರ್ಮಿಸಲು ಅನೇಕ ಮರಗಳನ್ನು ಕಡಿದಿದೆ. ಅರಾವಳಿ ಪರ್ವತಗಳ ಪ್ರದೇಶವು ವಿಮಾನ ಹಾರಟ ನಿಷೇದಿತ ಪ್ರದೇಶವಾಗಿದೆ. ಹೀಗಾಗಿ ಕಂಪನಿಯ ವಿರುದ್ಧ ಹರ್ಯಾಣ ಭೂ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 4 ಮತ್ತು 6ರ ಉಲ್ಲಂಘಿಸಿದೆ ಎನ್ನುವ ಆರೋಪ ಕೇಳಿಬಂದಿದೆ.

ನಾವು ಹೊಸ ಹೆಲಿಕಾಪ್ಟರ್ ಉತ್ಪಾದನೆಗೆ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಅರಾವಳಿ ಪರ್ವತಗಳ ಪ್ರದೇಶದಲ್ಲಿ ಉತ್ಪಾದನೆಯಿಂದ ಕಾಡು ಪ್ರಾಣಿಗಳಿಗಡೆ ತೊಂದರೆ ಆಗುತ್ತದೆ ಎಂದು ಆರ್‍ಡಬ್ಲ್ಯೂಎ ಸಂಸ್ಥೆಯ ಅಧ್ಯಕ್ಷ ರಾಜೇಶ್ ಚಾಂದ್ ವಾಟ್ ತಿಳಿಸಿದ್ದಾರೆ.

2016ರ ಜನವರಿಯಲ್ಲಿ ನಾವು ರಕ್ಷಣಾ ಸಚಿವರಿಗೂ ಮತ್ತು ಹಸಿರು ನ್ಯಾಯ ಮಂಡಳಿಗೆ ಅರಾವಳಿ ಪರ್ವತದಲ್ಲಿ ರನ್ ವೇ ನಿರ್ಮಾಣ ಮಾಡುತ್ತಿರುವ ಬಗ್ಗೆ ನಾವು ಆಕ್ಷೇಪಣೆ ಸಲ್ಲಿಸಿ ಪತ್ರ ಬರೆದಿದ್ದೇವೆ. ಈಗ ಮತ್ತೊಮ್ಮೆ ನಾವು ಹಸಿರು ನ್ಯಾಯ ಮಂಡಳಿಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದೇವೆ ಎಂದು ರಾಜೇಶ್ ಚಾಂದ್ ವಾಟ್ ಹೇಳಿದ್ದಾರೆ.

Comments are closed.