ವಿಶಿಷ್ಟ

ವಿಶ್ವದ ಅತಿ ಪುಟ್ಟ ರೂಬಿಕ್ ಕ್ಯೂಬ್ ವಿನ್ಯಾಸಗೊಳಿಸಿ ಮತ್ತೆ ಗಿನ್ನಿಸ್ ದಾಖಲೆ !

Pinterest LinkedIn Tumblr

43

ಈ ಹಿಂದೆ ವಿಶ್ವದ ಅತಿ ದೊಡ್ಡ ರೂಬಿಕ್ ಕ್ಯೂಬ್ ವಿನ್ಯಾಸಗೊಳಿಸಿ ದಾಖಲೆ ಮಾಡಿದ್ದ ಬ್ರಿಟನ್ನಿನ ಟೋನಿ ಫಿಷರ್, ಇದೀಗ ವಿಶ್ವದ ಅತಿ ಪುಟ್ಟ ರೂಬಿಕ್ ಕ್ಯೂಬ್ ವಿನ್ಯಾಸಗೊಳಿಸಿ ಮತ್ತೆ ಗಿನ್ನಿಸ್ ದಾಖಲೆ ಬರೆದಿದ್ದಾರೆ. ಐದು ಅಡಿ ಎತ್ತರದ ರೂಬಿಕ್ ಕ್ಯೂಬ್ ರೂಪಿಸಿ ಗಿನ್ನಿಸ್ ದಾಖಲೆ ಸೃಷ್ಟಿಸಿದ್ದವರು ಫಿಶರ್.

ಇದೀಗ .22 ಇಂಚಿನ ಅಳತೆಯಿರುವ ಅತಿ ಪುಟ್ಟ ರೂಬಿಕ್ ಕ್ಯೂಬ್ ರೂಪಿಸಿರುವುದಾಗಿ ವರ್ಲ್ಡ್‌ರೆಕಾರ್ಡ್‌ಅಕಾಡೆಮಿ ತಿಳಿಸಿದೆ. ಈ ಹಿಂದೆ 10ಎಂಎಂನ ಕ್ಯೂಬ್ ಅನ್ನು ರಷ್ಯಾದ ಎವ್‌ಜೆನಿಗ್ರಿ ತಯಾರು ಮಾಡಿದ್ದು, ಅತಿ ಪುಟ್ಟ ರೂಬಿಕ್ ಕ್ಯೂಬ್ ಇದೆಂದು ಪರಿಗಣಿಸಲಾಗಿತ್ತು.

ಫಿಶರ್ ಅವರ ಈ ರೂಬಿಕ್ ಕ್ಯೂಬ್‌ಅದಕ್ಕಿಂತ ಪುಟ್ಟದಾಗಿದ್ದು, ಆ ದಾಖಲೆ ಮುರಿದಿದೆ. ಚಿಮಟ ಉಪಯೋಗಿಸಿ ಈ ರೂಬಿಕ್ ಕ್ಯೂಬ್‌ಜೋಡಿಸಬಹುದು.

Comments are closed.