ಅಂತರಾಷ್ಟ್ರೀಯ

‘ವೆಡ್ಡಿಂಗ್‌ಡ್ರೆಸ್‌ಸಿಟಿ’ ಕಾರ್ಯಕ್ರಮದಲ್ಲಿ ವಧುವಿನ ಉಡುಗೆತೊಟ್ಟು ಗಿನ್ನೆಸ್‌ದಾಖಲೆ ಮಾಡಿದ 908 ಯುವತಿಯರು !

Pinterest LinkedIn Tumblr

32

ಬೀಜಿಂಗ್‌: ಚೀನಾದ ಜಿಯಾಂಗ್ಸು ಪ್ರಾಂತ್ಯದ ಸುಝೌನ ಹ್ಯುಖ್ಯು ನಗರ ಜಿಲ್ಲೆಯಲ್ಲಿ ಆಯೋಜಿಸಿದ್ದ ‘ವೆಡ್ಡಿಂಗ್‌ಡ್ರೆಸ್‌ಸಿಟಿ’ ಕಾರ್ಯಕ್ರಮದಲ್ಲಿ 908 ಯುವತಿಯರು ವಧುವಿನ ಉಡುಗೆ ತೊಟ್ಟು ಒಂದೆಡೆ ಸೇರಿದ್ದು ಗಿನ್ನೆಸ್‌ದಾಖಲೆಗೆ ಪಾತ್ರವಾಗಲಿದೆ.

ಗಿನ್ನೆಸ್‌ವಿಶ್ವ ದಾಖಲೆಯ ತೀರ್ಪುಗಾರರರಾಗಿರುವ ಮ್ಯಾಗ್ಗಿ ಲು ಅವರು ಈ ಕುರಿತು ನಿರ್ಣಯ ಕೈಗೊಳ್ಳಲಿದ್ದಾರೆ. ಈ ಹಿಂದೆ ನಡೆದ ಕಾರ್ಯಕ್ರಮದಲ್ಲಿ 65 ಯುವತಿಯರು ವಧುವಿನ ಉಡುಗೆ ತೊಟ್ಟು ಒಂದೇ ಕಡೆ ಸೇರಿದ್ದರು. ಸುಝೌ ಹ್ಯುಖ್ಯು ಬ್ರಿಡಾಲ್‌ಇನ್‌ವೆಸ್ಟ್‌ಮೆಂಟ್‌ಸಂಸ್ಥೆ ಈ ಕಾರ್ಯಕ್ರಮ ಏರ್ಪಡಿಸಿತ್ತು. ಚೀನಾದ ವಿವಿಧ ನಗರಗಳ ಯುವತಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ 500 ಜೋಡಿಗಳು ವಿಹಾರ ನೌಕೆಯಲ್ಲಿ ವಿಹರಿಸುವ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗಿದೆ. ಐದು ದಿನಗಳ ಕಾಲ ಜೋಡಿಗಳು ವಿಹರಿಸಲು ಅವಕಾಶ ಕಲ್ಪಿಸಲಾಗಿದೆ.

Comments are closed.