ಕರ್ನಾಟಕ

ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಆರ್ಗ್ಯಾನಿಕ್ ಕ್ಯಾರಿಬ್ಯಾಗ್‌

Pinterest LinkedIn Tumblr

99ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ ಆದ ಮೇಲೆ ಅದಕ್ಕೆ ಪರ್ಯಾಯವಾಗಿ ಬಟ್ಟೆ ಚೀಲಗಳನ್ನು ಬಳಸಲಾಗುತ್ತಿದೆ. ಇದೀಗ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಸಾವಯವ ಕ್ಯಾರಿಬ್ಯಾಗ್‌ ಬಂದಿದೆ. ಗ್ರೀನ್‌ ಕಾರ್ಪೋರೇಷನ್‌ ಎಂಬ ಕಂಪನಿ ಎನ್ವೀ ಗ್ರೀನ್‌ ಎಂಬ ಸಾವಯವ ಕ್ಯಾರಿ ಬ್ಯಾಗ್‌ ಅನ್ನು ಸಿದ್ಧಗೊಳಿಸಿದೆ. ಇನ್ನು ಮುಂದೆ ನೀವು ಈ ಕ್ಯಾರಿ ಬ್ಯಾಗ್‌ ಅನ್ನು ಬಳಸಬಹುದು.

ಬಿಸಿನೀರಲ್ಲಿ ಕರಗುತ್ತದೆ, ಮಣ್ಣಲ್ಲಿ ಮಣ್ಣಾಗಿ ಬೆರೆಯುತ್ತದೆ. ಮರಗೆಣಸೇ ಇದರ ಮೂಲವಸ್ತು, ಬೇಕಿದ್ದರೆ ತಿಂದು ನೋಡಬಹುದು

ಏನಿದು ಸಾವಯವ ಕ್ಯಾರಿಬ್ಯಾಗ್‌?
ಗ್ರೀನ್‌ ಕಾರ್ಪೋರೇಷನ್‌ ಕಂಪನಿ ತಯಾರಿಸಿರುವ ಒಂದು ಪರಿಸರ ಸ್ನೇಹಿ ಕ್ಯಾರಿಬ್ಯಾಗ್‌ ಇದು. ಈ ಬ್ಯಾಗ್‌ ಅನ್ನು ತರಕಾರಿಗಳು ಮತ್ತು ತರಕಾರಿ ತ್ಯಾಜ್ಯದಿಂದ ತಯಾರಿಸಲಾಗುತ್ತದೆ. ಜೋಳ, ಕಬ್ಬಿನ ಜಲ್ಲೆ ಇತ್ಯಾದಿಗಳನ್ನು ಉಪಯೋಗಿಸಲಾಗುತ್ತದೆ. ಪ್ಲಾಸ್ಟಿಕ್‌ ಬಳಕೆ ಇಲ್ಲವೇ ಇಲ್ಲ. ಇಂಟರೆಸ್ಟಿಂಗ್‌ ಅಂದ್ರೆ ಈ ಬ್ಯಾಗ್‌ ಶುದ್ಧ ಸಾವಯವ ಉತ್ಪನ್ನವಾಗಿದ್ದು, ಇದನ್ನು ಬಿಸಿ ನೀರಲ್ಲಿ ಮುಳುಗಿಸಿದರೆ ಹಾಗೇ ಕರಗಿಹೋಗುತ್ತದೆ. ಬೆಂಕಿಯಲ್ಲಿ ಸುಟ್ಟರೂ ತೊಂದರೆಯೇನಿಲ್ಲ. ಪರಿಸರಕ್ಕೆ ಯಾವುದೇ ಹಾನಿ ಇಲ್ಲ. ಈಗಾಗಲೇ ಈ ಕ್ಯಾರಿಬ್ಯಾಗ್‌ ದುಬೈ ಮತ್ತು ಕತಾರ್‌ಗಳಲ್ಲಿ ಜನಪ್ರಿಯವಾಗಿವೆ.

ಅಂದಹಾಗೆ ಈ ಗ್ರೀನ್‌ ಕಾರ್ಪೋರೇಷನ್‌ ಸಂಸ್ಥೆಯ ಸಿಇಓ ಅಶ್ವಥ್‌ ಹೆಗ್ಡೆ ದಕ್ಷಿಣ ಕನ್ನಡದ ಬೆಳ್ತಂಗಡಿ ಸಮೀಪದ ಬಳಂಜದವರು. ಉದ್ಯಮಿ ಆಗಿರುವ ಇವರಿಗೆ ಮೊದಲಿಂದಲೂ ಪರಿಸರ ಸ್ನೇಹಿ ಉತ್ಪನ್ನಗಳತ್ತ ಆಸಕ್ತಿ ಜಾಸ್ತಿ. ಈಗಾಗಲೇ ಅಡಿಕೆ ಹಾಳೆಗಳ ತಟ್ಟೆಯನ್ನು ವಿದೇಶದಲ್ಲಿ ಜನಪ್ರಿಯಗೊಳಿಸಿರುವ ಇವರು ಪ್ಲಾಸ್ಟಿಕ್‌ ಬ್ಯಾಗ್‌ಗೆ ಪರ್ಯಾಯವಾಗಿ ಏನಾದರೂ ಸೃಷ್ಟಿಸಬೇಕು ಅಂತ ಕನಸು ಕಂಡಿದ್ದರು. ಆ ಕನಸಿನ ಫ‌ಲವಾಗಿಯೇ ಸೃಷ್ಟಿಯಾಗಿದ್ದು ಈ ಎನ್ವೀ ಗ್ರೀನ್‌ ಆರ್ಗ್ಯಾನಿಕ್ ಕ್ಯಾರಿಬ್ಯಾಗ್‌.

ತಯಾರಿಸೋದು ಹೇಗೆ?
ಈ ಸಾವಯವ ಕ್ಯಾರಿಬ್ಯಾಗ್‌ ಅನ್ನು ತರಕಾರಿಗಳು ಮತ್ತು ತರಕಾರಿ ತ್ಯಾಜ್ಯಗಳಿಂದ ತಯಾರಿಸಲಾಗುತ್ತದೆ. ಹಾಗಾಗಿ ಈ ಕ್ಯಾರಿಬ್ಯಾಗ್‌ನಿಂದ ಯಾವುದೇ ಸಮಸ್ಯೆ ಇಲ್ಲ. ನೆಲದಲ್ಲಿ ಬಿದ್ದರೆ ಕರಗಿಹೋಗುತ್ತದೆ. ದನಗಳು ಈ ಕ್ಯಾರಿಬ್ಯಾಗ್‌ ಅನ್ನು ತಿಂದರೂ ಏನೂ ಸಮಸ್ಯೆ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ರೈತರಿಂದಲೇ ತರಕಾರಿಗಳನ್ನು ಖರೀದಿಸಿ ರೈತರಿಗೆ ನೆರವಾಗುವ ಉದ್ದೇಶವೂ ಇದೆ ಎನ್ನುತ್ತಾರೆ ಅಶ್ವಥ್‌ ಹೆಗ್ಡೆ. ಈ ಕ್ಯಾರಿಬ್ಯಾಗ್‌ಗಳು ಎಷ್ಟು ಭಾರ ತಡೆಯಬಲ್ಲದು ಅಂತ ಕೇಳಿದರೆ ಸಾಮಾನ್ಯ ಚೀಲಗಳಷ್ಟೇ ಸಾಮರ್ಥ್ಯ ಈ ಬ್ಯಾಗ್‌ಗಳಿಗೂ ಇವೆ ಎನ್ನುತ್ತಾರೆ.

ಈ ಕ್ಯಾರಿಬ್ಯಾಗ್‌ ಎಲ್ಲಿ ಸಿಗುತ್ತದೆ?
ಸದ್ಯ ಈ ಬ್ಯಾಗ್‌ಗಳು ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಇನ್ನೇನು ಮಾರುಕಟ್ಟೆಗೆ ಲಗ್ಗೆ ಇಡಲು ಕ್ಷಮಗಣನೆ ಶುರುವಾಗಿದೆ. ನಿಮಗೆ ಈಗಲೇ ಈ ಸಾವಯವ ಬ್ಯಾಗ್‌ಗಳು ಬೇಕೆಂದಾದರೆ ಎನ್ವೀ ಗ್ರೀನ್‌ ಸಂಸ್ಥೆಗೆ ದೂರವಾಣಿ ಮಾಡಿ ತರಿಸಿಕೊಳ್ಳಬಹುದು. ಯಾರಾರಿಗೆ ಈ ಎನ್ವೀಗ್ರೀನ್‌ ಆಗ್ಯಾìನಿಕ್‌ ಕ್ಯಾರಿಬ್ಯಾಗ್‌ ಡೀಲರ್‌ ಆಗಲು ಆಸಕ್ತಿ ಇದೆಯೋ ಅವರು ನಮ್ಮನ್ನು ಸಂಪರ್ಕಿಸಬಹುದು ಎನ್ನುತ್ತಾರೆ ಅಶ್ವಥ್‌.

ದೂ- : 9686558866
ಇಮೇಲ್‌- ceo@gogreenqatar.com
ವೆಬ್‌ಸೈಟ್‌- www.envigreenbiotech.com, www.envigreen.in

-ಉದಯವಾಣಿ

Comments are closed.