ಕರ್ನಾಟಕ

ಘೋಷಣೆ ಕೂಗುವುದರ ಬದಲು ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ಗೌರವ ಕೊಡಿ

Pinterest LinkedIn Tumblr

sidduuಬೆಂಗಳೂರು: ರಾಜ್ಯಾಧ್ಯಂತ 70 ನೇ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಂಗಳೂರಿನ ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧ್ವಜಾರೋಹಣ ನಡೆಸಿ ರಾಜ್ಯವನ್ನುದ್ದೇಶಿಸಿ ಭಾಷಣ ಮಾಡಿದರು. ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ ಉಸ್ತುವಾರಿ ಸಚಿವರುಗಳು ಧ್ವಜಾರೋಹಣ ನಡೆಸಿದರು.

ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ ಭಾರತ್‌ ಮಾತಾ ಕೀ ಜೈ ಎಂದರೆ ದೇಶ ಭಕ್ತ ಎನಿಸಿಕೊಳ್ಳುವುದಿಲ್ಲ. ಇನ್ನೊಬ್ಬರ ಸ್ವಾತಂತ್ರ್ಯವನ್ನು ಗೌರವಿಸುವುದು .ಬಡವರು,.ಶೋಷಿತರು ಮಹಿಳೆಯರಿಗೆ ಗೌರವ ಸೂಚಿಸುವುದೇ ನಿಜವಾದ ದೇಶಭಕ್ತಿ ಎಂದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕನ್ನಡಿಗ ಹೋರಾಟಗಾರರ ಕೊಡುಗೆ ಅಪಾರವಾಗಿದ್ದು ,ಸಂಗೊಳ್ಳಿ ರಾಯಣ್ಣ, ಆಲೂರು ವೆಂಕಟ ರಾವ್, ಹರ್ಡಿಕರ್ ಮಂಜಪ್ಪ ಅವರಂತಹ ಹೋರಾಟಗಾರರನ್ನು ನಾವು ಸದಾ ಸ್ಮರಿಸಬೇಕಾಗಿದೆ ಎಂದರು.

ಎಲ್ಲೆ ಸಾವು ನೋವುಗಳು ಸಂಭವಿಸಿದರೆ ನಾವು ಮರುಗಬೇಕು.ದ್ವೇಷ ಅಸೂಹೆಗಳಿಂದ ದೇಶವನ್ನು ಕಟ್ಟಲು ಸಾಧ್ಯವಿಲ್ಲ. ಎಲ್ಲರೂ ಪರಸ್ವರ ಪ್ರೀತಿಯಿಂದ ಸಹಬಾಳ್ವೆ ನಡೆಸಿದಾಗ ದೇಶ ಅಭಿವೃದ್ದಿಕಾಣುತ್ತದೆ ಎಂದರು.

ಇದೇ ವೇಳೆ ದೇಶದಲ್ಲಿ ದಲಿತರು ,ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಸಿಎಂ ಇವುಗಳ ವಿರುದ್ಧ ಹೋರಾಡಲು ಕರೆ ನೀಡಿದರು.

ಸರಕಾರ ಕೈಗೊಂಡ ಜನಪರ ಕಾರ್ಯಕ್ರಮ,ರೈತರು ಮಹಿಳೆಯರ ಪ್ರಗತಿಗೆ ಕೈಗೊಂಡ ವಿವಿಧ ಯೋಜನೆಗಳ ಬಗ್ಗೆ ತಿಳಿಸಿ ನಮ್ಮ ಸರಕಾರ ನುಡಿದಂತೆ ನಡೆದಿದೆ. ನೊಂದ ರೈತರ ಜೊತೆಗೆ ಸರ್ಕಾರ ದೃಢವಾಗಿ ನಿಂತಿದೆ ಎಂದರು.

-ಉದಯವಾಣಿ

Comments are closed.