ರಾಷ್ಟ್ರೀಯ

ಎಲೆ ಮರೆಯ ಕಾಯಿ ರಾಷ್ಟ್ರಧ್ವಜ ವಿನ್ಯಾಸಕಾರ ಪಿಂಗಾಲಿ ವೆಂಕಯ್ಯ

Pinterest LinkedIn Tumblr

rastraಸ್ವಾತಂತ್ರ್ಯದಿನ ಬಂತೆಂದರೆ ಸಾಕು ಎಲ್ಲೆಲ್ಲೂ ಕಣ್ಮನ ಸೆಳೆಯುವುದು ನಮ್ಮ ರಾಷ್ಟ್ರಧ್ವಜ. ಕೇಸರಿ, ಬಿಳಿ, ಹಸಿರು ಮಧ್ಯೆ ಚಕ್ರ ಇರುವುದು ರಾಷ್ಟ್ರಧ್ವಜದ ಮಾದರಿ. ಈ ರಾಷ್ಟ್ರಧ್ವಜದ ವಿನ್ಯಾಸದ ಹಿಂದಿನ ವ್ಯಕ್ತಿ ಪಿಂಗಾಲಿ ವೆಂಕಯ್ಯನವರು. ಅವರು ಮಾಡಿದ್ದ ಮೂಲ ವಿನ್ಯಾಸ ಇಂದು ನಮ್ಮ ಹೆಮ್ಮೆಯಾಗಿದ್ದು ಕಣ್ತುಂಬಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ತೆರೆಯ ಮರೆಯಲ್ಲಿರುವ ಪಿಂಗಾಲಿ ವೆಂಕಯ್ಯನವರ ಕುರಿತ ವಿವರಗಳು ಇಲ್ಲಿವೆ.

ಆಂಧ್ರದ ವೆಂಕಯ್ಯನವರು
1876 ಆ.2ರಂದು ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆ ದಿವಿ ತಾಲೂಕಿನ ಮಚಲಿಪಟ್ಟಣ ಬಳಿಯ ಹಳ್ಳಿಯಲ್ಲಿ ಪಿಂಗಾಲಿ ವೆಂಕಯ್ಯನವರ ಜನನವಾಗಿತ್ತು. ಅವರದ್ದು ಬಹುಮುಖೀ ವ್ಯಕ್ತಿತ್ವ. ಸ್ವಾತಂತ್ರ್ಯ ಹೋರಾಟದೊಂದಿಗೆ ವೈವಿಧ್ಯಮಯ ಚಟುವಟಿಕೆಯಲ್ಲಿ ತೊಡಗಿಕೊಂಡವರು ಅವರು. ಹುಟ್ಟೂರಲ್ಲಿ ಪ್ರಾಥಮಿಕ ಶಿಕ್ಷಣ, ಮಚಲಿಪಟ್ಟಣದಲ್ಲಿ ಪ್ರೌಢಶಿಕ್ಷಣ ಮುಗಿಸಿ ಕೊಲಂಬೋಗೆ ಸೀನಿಯರ್‌ ಕೇಂಬ್ರಿಡ್ಜ್ ಶಿಕ್ಷಣಕ್ಕೆ ತೆರಳಿದ ವೆಂಕಯ್ಯನವರು, ಬಳಿಕ ಲಾಹೋರ್‌ನಲ್ಲಿ ಆಂಗ್ಲೊ ಇಂಡಿಯನ್‌ ಕಾಲೇಜಿನಲ್ಲಿ ಜಪಾನಿ, ಉರ್ದು, ಇತಿಹಾಸವನ್ನು ಓದಿದ್ದರು. ಇದಕ್ಕೂ ಮುನ್ನ ಅವರು ಬೆಂಗಳೂರು ಮತ್ತು ಮದ್ರಾಸಿನಲ್ಲಿ ರೈಲ್ವೆ ಗಾರ್ಡ್‌ ಆಗಿ, ಬಳ್ಳಾರಿಯಲ್ಲಿ ಪ್ಲೇಗ್‌ ಅಧಿಕಾರಿಯಾಗಿದ್ದರು. 19ನೇ ವಯಸ್ಸಿನಲ್ಲಿ ಸೇನೆಗೂ ಸೇರಿ ಆμÅಕಾದಲ್ಲಿ ನಡೆದ ಆಂಗ್ಲೋ- ಬೋಯರ್‌ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಆಗ ವೆಂಕಯ್ಯನವರು ಗಾಂಧಿ ಅವರ ಸಂಪರ್ಕಕ್ಕೆ ಬಂದಿದ್ದರು.

ರಾಷ್ಟ್ರಧ್ವಜಕ್ಕೆ ಖಾದಿಯೇ ಏಕೆ?
“ಚರಕ ದೇಶದ ಬಡಜನರ ಹಸಿವನ್ನು ನೀಗಿಸುತ್ತದೆ. ಯಾವುದೇ ಕೈಗಾರಿಕಾ ಅಭಿವೃದ್ಧಿ ಯೋಜನೆಗಳು 1,900 ಮೈಲು
ಉದ್ದ, 1,500 ಮೈಲು ಅಗಲದ ದೇಶದ ಬಡತನವನ್ನು ಇಂಗಿಸುವುದಿಲ್ಲ. ಇಷ್ಟೊಂದು ದೊಡ್ಡ ಭೂಖಂಡವನ್ನು ಇಂಗ್ಲೆಂಡ್‌ನ‌ಂತೆ ಕೈಗಾರಿಕಾ ದೇಶವಾಗಿ ಪರಿವರ್ತಿಸಲು ಆಗದು’ ಎಂದು ಗಾಂಧೀಜಿಯವರು ಅಂದು “ಯಂಗ್‌ ಇಂಡಿಯ’ ಪತ್ರಿಕೆಯಲ್ಲಿ ಬರೆದಿದ್ದರು. ಹತ್ತಿಯನ್ನು ಮನೆಗಳಲ್ಲಿ ಬಟ್ಟೆಯಾಗಿ ಪರಿವರ್ತಿಸಿದರೆ ದೇಶದ ಸಂಪತ್ತಾಗುತ್ತದೆ. ಆದ್ದರಿಂದಲೇ ಹತ್ತಿ ಭಾರತದ ಜೀವನದಲ್ಲಿ ಗಾಳಿ ಮತ್ತು ನೀರಿನಷ್ಟೇ ಅಗತ್ಯದ್ದು. ಇದೇ ಕಾರಣಕ್ಕಾಗಿ ನಮ್ಮ ಧ್ವಜವನ್ನು ಖಾದಿಯಲ್ಲಿ ತಯಾರಿಸುವ ಪ್ರಕ್ರಿಯೆ ನಡೆಯಿತು.

ಬಹುಮುಖೀ ಪ್ರತಿಭೆಯ ವೆಂಕಯ್ಯ
ಉತ್ತರ ಭಾರತದಲ್ಲಿ ವೆಂಕಯ್ಯನವವರು ಸುಮಾರು 5 ವರ್ಷಗಳ ಕಾಲ ಇದ್ದು, ವೇಳೆ ದಾದಾಭಾಯಿ ನವರೋಜಿ ಸಹಿತ ಸ್ವಾತಂತ್ರ್ಯ ಹೋರಾಟಗಾರರ ಸಂಪರ್ಕದಲ್ಲಿದ್ದರು.1906ರಿಂದ 1911ರವರೆಗೆ ವೆಂಕಯ್ಯ ಧಾನ್ಯಗಳ ತಳಿ ಕುರಿತು ಸಂಶೋಧನೆ ನಡೆಸಿದರು. ಇದೇ ವೇಳೆ ಕಾಂಬೋಡಿಯನ್‌ ಕಾಟನ್‌ ಎಂಬ ತಳಿಯ ಸಂಶೋಧನೆಯಿಂದಾಗಿ ಪತ್ತಿ ವೆಂಕಯ್ಯ (ಕಾಟನ್‌ ವೆಂಕಯ್ಯ) ಎಂಬ ಹೆಸರು ಬಂತು. ವಜ್ರದ ಗಣಿಗಾರಿಕೆ ಕುರಿತು ಜ್ಞಾನ ಹೊಂದಿದ್ದರಿಂದ ಡೈಮಂಡ್‌ ವೆಂಕಯ್ಯ ಅನಿಸಿದರು. ತಮ್ಮದೇ ವಿರುದ್ಧ ಹೋರಾಡುತ್ತ ಬಂದಿದ್ದರೂ ಇವರ ಸಂಶೋಧನೆಗೆ ಮಾರು ಹೋದ ಬ್ರಿಟಿಷರು ಗೌರವ ಡಾಕ್ಟರೇಟ್‌ಗೆ ಸಮನಾದ ಬ್ರಿಟನ್‌ನ ರಾಯಲ್‌ ಅಗ್ರಿಕಲ್ಚರಲ್‌ ಸೊಸೈಟಿಯ ಗೌರವ ಸದಸ್ಯತ್ವ ನೀಡಿದರು.

ಧ್ವಜ ವಿನ್ಯಾಸ ಅಧ್ಯಯನ ಮಾಡಿದ್ದರು!
ಹುಟ್ಟೂರು ಮಚಲಿಪಟ್ಟಣದಲ್ಲಿ ನ್ಯಾಶನಲ್‌ ಶಾಲೆಯನ್ನು ತೆರೆದು ಅಲ್ಲಿ ಸೇನಾ ತರಬೇತಿ, ಕುದುರೆ ಸವಾರಿ, ಇತಿಹಾಸ, ಕೃಷಿ, ಪ್ರಕೃತಿಗೂ ಇರುವ ಸಂಬಂಧದ ಕುರಿತು ಪಾಠ ಮಾಡಿದರು. 1916-21 ಅವಧಿಯಲ್ಲಿ ಧ್ವಜಗಳ ಕುರಿತು ಸಂಶೋಧನೆ ನಡೆಸಿದರು. ಕಾಕಿನಾಡದಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್‌ ರಾಷ್ಟ್ರೀಯ ಅಧಿವೇಶನದಲ್ಲಿ ರಾಷ್ಟ್ರ ಧ್ವಜದ ಸಲಹೆ ನೀಡಿದರು. 1921 ಮಾ.31- ಎ.1 ವರೆಗೆ ವಿಜಯವಾಡದಲ್ಲಿ ನಡೆದ ಅಖೀಲ ಭಾರತೀಯ ಕಾಂಗ್ರೆಸ್‌ ಸಮಿತಿ ಸಭೆಯಲ್ಲಿ ವೆಂಕಯ್ಯ ನೀಡಿದ ಧ್ವಜ ಪ್ರಸ್ತಾವ ಗಾಂಧೀಜಿಯವರಿಗೆ ಹಿಡಿಸಿತು. ಅದೇ ರೀತಿ ಜಲಂಧರದ ಲಾಲಾ ಹಂಸರಾಜ್‌ ನೀಡಿದ ಚರಕದ ಚಿಹ್ನೆಯೂ ಇಷ್ಟವಾಯಿತು. ಕೇಸರಿ ಮತ್ತು ಹಸಿರು ಹಿನ್ನೆಲೆಯಲ್ಲಿ ಧ್ವಜ ವಿನ್ಯಾಸವನ್ನು ಮೂರೇ ಗಂಟೆಗಳಲ್ಲಿ ಮಾಡಿದರೆಂದು ಗಾಂಧೀಜಿಯವರು “ಯಂಗ್‌ ಇಂಡಿಯ’ ಪತ್ರಿಕೆಯಲ್ಲಿ (13-4-1921) ಬರೆದಿರುವುದನ್ನು ಉಡುಪಿ ಎಂಜಿಎಂ
ಕಾಲೇಜಿನ ಗಾಂಧೀ ಅಧ್ಯಯನ ಕೇಂದ್ರದ ಸಂಶೋಧಕ ಯು.ವಿನೀತ್‌ ರಾವ್‌ ಉಲ್ಲೇಖೀಸುತ್ತಾರೆ. ಆದರೆ 1931ರಲ್ಲಿ ಮುಂಬೈಯಲ್ಲಿ ನಡೆದಿದ್ದ ಕಾಂಗ್ರೆಸ್‌ ಸಮಿತಿ ಸಭೆ ಈ ಧ್ವಜವನ್ನು ತಿರಸ್ಕರಿಸಿತು. ಇದರಲ್ಲೇ ಬದಲವಾಣೆ ಮಾಡಿ ಸ್ವೀಕರಿಸಲು ನಿರ್ಧರಿಸಿತು. ಕೊನೆಗೆ ಸಮಾನಾಂತರ ಬಣ್ಣಗಳಿರುವ ಕೇಸರಿ, ಬಿಳಿ, ಹಸಿರು ಕೂಡಿದ, ಮಧ್ಯದಲ್ಲಿ ಚರಕವಿರುವ ಧ್ವಜವನ್ನು ಅಂಗೀಕರಿಸಲಾಯಿತು.

ರಾಷ್ಟ್ರ ಧ್ವಜದ ವ್ಯಾಖ್ಯಾನವೇನು?
ಸ್ವಾತಂತ್ರಾé ನಂತರ 1947ರ ಜು.22ರಂದು ಡಾ|ರಾಜೇಂದ್ರಪ್ರಸಾದರ ಅಧ್ಯಕ್ಷತೆಯಲ್ಲಿ ಸೇರಿದ ಸಾಂವಿಧಾನಿಕ ಶಾಸನ ಸಭೆ ರಾಷ್ಟ್ರಧ್ವಜ ಕುರಿತ ಪ್ರಥಮ ಕಾರ್ಯಸೂಚಿಯ ನಿರ್ಣಯ ಅಂಗೀಕರಿಸಿತು. ಜವಾಹರಲಾಲ್‌ ನೆಹರು ಅವರು ಕೇಸರಿ, ಬಿಳಿ, ಹಸಿರು ಬಣ್ಣದ ಸಮಾನಾಂತರ ಅನುಕ್ರಮದಲ್ಲಿ ಸಮಪ್ರಮಾಣದಲ್ಲಿರಲು ಮತ್ತು ಮಧ್ಯದಲ್ಲಿ ಅಶೋಕ ಚಕ್ರವನ್ನು ಬಿಂಬಿಸಲು ಸೂಚಿಸಿದರು. ಡಾ|ರಾಧಾಕೃಷ್ಣನ್‌ ಈ ಬಣ್ಣಗಳಿಗೆ ಸಾಕ್ಷಾತ್ಕಾರ / ರಾಜಕೀಯ ನಾಯಕರಿಗೆ ಸ್ವಾರ್ಥಪರ ಇಚ್ಛೆಗಳಿಂದ ದೂರ ಉಳಿಯುವ ಅನಾಸಕ್ತಿ=ತ್ಯಾಗ (ಕೇಸರಿ), ಜ್ಞಾನೋದಯ/ ಸತ್ಯ (ಬಿಳಿ), ಸಮೃದ್ಧಿ (ಹಸಿರು) ವಿಶ್ಲೇಷಣೆಯನ್ನು ಮಾಡಿದ್ದರು.

ಗಾಂಧಿ ತತ್ವವೇ ವೆಂಕಯ್ಯನವರ ಉಸಿರಾಗಿತ್ತು
ಗಾಂಧೀವಾದಿಯಾಗಿದ್ದ ವೆಂಕಯ್ಯನವರು ಜೀವನದುದ್ದಕ್ಕೂ ಬಡತನ ಅನುಭವಿಸಿದ್ದರು. ವಿಜಯವಾಡದಲ್ಲಿ 1963 ಮೇ.4ರಂದು ನಿಧನರಾಗಿದ್ದಾಗ ಅವರಿದ್ದದ್ದು ಒಂದು ಗುಡಿಸಲಲ್ಲಿ. ರಾಷ್ಟ್ರಧ್ವಜ ವಿನ್ಯಾಸಕಾರ ವೆಂಕಯ್ಯನವರ ಊರು ಮಚಲಿಪಟ್ಟಣದಲ್ಲಿ ಅವರ ಬಗ್ಗೆ ಯಾವುದೇ ಸ್ಮಾರಕವಿಲ್ಲ. 2009ರಲ್ಲಿ ವೆಂಕಯ್ಯ ಸ್ಮರಣಾರ್ಥ ಅಂಚೆ ಚೀಟಿ ಬಿಡುಗೊಂಡಿತು. 2011ರಲ್ಲಿ ಭಾರತರತ್ನ ಪ್ರಶಸ್ತಿಗೆ ಪ್ರಸ್ತಾವನೆ ಇತ್ತದರೂ ಮುಂದುವರಿಯಲಿಲ್ಲ. ಕಳೆದ ಜನವರಿಯಲ್ಲಿ ವಿಜಯವಾಡ ಆಕಾಶವಾಣಿ ಕೇಂದ್ರದಲ್ಲಿ ವೆಂಕಯ್ಯನವರ ಪುತ್ಥಳಿಯನ್ನು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅನಾವರಣಗೊಳಿಸಿದ್ದರು. ವೆಂಕಯ್ಯನವರ ಪುತ್ರಿಗೆ ಇತ್ತೀಚೆಗಷ್ಟೇ ಪಿಂಚಣಿ ಲಭ್ಯವಾಗಲು ಶುರುವಾಗಿತ್ತು.

ಮಾಹಿತಿ: „ ಮಟಪಾಡಿ ಕುಮಾರಸ್ವಾಮಿ

-ಉದಯವಾಣಿ

Comments are closed.