
ನವದೆಹಲಿ: ಬಿಜೆಪಿಯ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್‌ಸ್ವಾಮಿ ಈ ಬಾರಿ ಇನ್ನೊಂದು ಹರಿತ ಬಾಣಬಿಟ್ಟಿದ್ದಾರೆ. ಅದೂ ನೇರವಾಗಿ ಪ್ರಧಾನಮಂತ್ರಿ ಮೋದಿ ಅವರಿಗೆ ಗುರಿಯಿಟ್ಟಿದ್ದಾರೆ.
`ಯಾರಿಂದಲೂ ಏನೂ ಆಗಬೇಕಿಲ್ಲ’ ಎಂಬ ಧೋರಣೆಯಿಂದಲೇ ಮಾತನಾಡುತ್ತಿರುವ ಸ್ವಾಮಿ ಈಗ `ಮೋದಿಯವರ ಅಚ್ಛೇ ದಿನ್ ಬಗ್ಗೆ ಇಷ್ಟೆಲ್ಲಾ ಪ್ರಚಾರ ನೀಡುತ್ತಿದ್ದೀರಿ, ನಿಜವಾದ ತಲಾದಾಯ, ಬೆಳವಣಿಗೆ ಏನು ಎಂಬುದು ಬಹಿರಂಗವಾದರೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತದೆ’ ಎಂದಿದ್ದಾರೆ!
`ನಾನೇನಾದರೂ ನಿಜವಾದ ತಲಾದಾಯದ ಅಂಕಿ ಅಂಶಗಳನ್ನು ಬಹಿರಂಗಪಡಿಸಿದರೆ ಅದನ್ನು ಪಕ್ಷ (ಬಿಜೆಪಿ) ಇಷ್ಟಪಡುವುದಿಲ್ಲ ಹಾಗೂ ನನ್ನದು ಪಕ್ಷ ವಿರೋಧಿ ಚಟುವಟಿಕೆ ಎಂದು ಘೋಷಿಸಿಬಿಡುತ್ತಾರೆ’ ಎಂದು ಟ್ವೀಟ್ ಮಾಡಿದ್ದಾರೆ.
ಸುಬ್ರಮಣಿಯನ್ ಸ್ವಾಮಿ ಬಾಯಿಗೆ ಬಂದಂತೆ ಮಾತನಾಡುತ್ತಿರುವುದರ ಬಗ್ಗೆ ಇತ್ತೀಚೆಗೆ ಪ್ರಧಾನಿ ಮೋದಿ ಪರೋಕ್ಷವಾಗಿ ಪ್ರಸ್ತಾಪಿಸಿ ಎಚ್ಚರಿಕೆ ನೀಡಿದ್ದಾರೆ.
`ವ್ಯವಸ್ಥೆಯನ್ನು ಮೀರಿ ಯಾರಿಗೂ ಹೇಳಿಕೆ ನೀಡುವ ಹಕ್ಕಿಲ್ಲ’ ಎಂದು ಪ್ರಧಾನಿಯವರು ಟಿವಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
Comments are closed.