ಕರ್ನಾಟಕ

ಸಿಎಂ ಸಿದ್ದರಾಮಯ್ಯ ವಿಶ್ವಾಸದ್ರೋಹಿ ಎಂದ ಶ್ರೀನಿವಾಸ್‌ಪ್ರಸಾದ್

Pinterest LinkedIn Tumblr

shreenivas

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸದ್ರೋಹಿ. ಮುಖ್ಯಮಂತ್ರಿಯಾಗಲು ತಾವು ನೀಡಿದ ನೆರವನ್ನೂ ಮರೆತು ದುರಾಹಂಕಾರಿಯಂತೆ ವರ್ತಿಸಿದ್ದಾರೆ ಎಂದು ಮಾಜಿ ಸಚಿವ ಶ್ರೀನಿವಾಸ್‌ಪ್ರಸಾದ್ ಇಂದಿಲ್ಲಿ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ಅಧಿಕಾರದ ಗದ್ದುಗೆ ಹಿಡಿಯಲು ಸಾಕಷ್ಟು ನೆರವು ನೀಡಿದ್ದೆ. ಅದನ್ನೆಲ್ಲಾ ಬದಿಗೊತ್ತಿ ನಮ್ಮ ಸಹಾಯವನ್ನು ಮರೆತಿದ್ದಾರೆ ಎಂದರು.

ಸಿದ್ದರಾಮಯ್ಯ ಅವರನ್ನು ಸಿಎಂ ಮಾಡುವಲ್ಲಿ ನನ್ನ ಪ್ರಯತ್ನವೂ ಇದೆ. ವರುಣಾದಲ್ಲಿ ಸಿದ್ದರಾಮಯ್ಯರನ್ನು ನಿಲ್ಲಿಸಿದ್ದೆ ನಾನು. ಆದ್ರೆ ಸಿಎಂ ನನಗೆ ವಿಶ್ವಾಸದ್ರೋಹ ಎಸಗಿದರು. ಹಾಗಾಗಿ ವಿಶ್ವಾಸದ್ರೋಹಿ ವಿರುದ್ಧ ಮಾತನಾಡುವ ಸಮಯ ಈಗ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅಹಂಕಾರದ ಸಿಎಂ. ಅವರು ಅನಾಗರಿಕವಾಗಿ ವರ್ತಿಸಿದ್ದಾರೆ. ಸಿಎಂ ಹೊಟ್ಟೆಕಿಚ್ಚಿನ ಮನುಷ್ಯ. ತಮ್ಮ ಸ್ವಾರ್ಥಕ್ಕಾಗಿ ಸಂಪುಟ ಪುನಾರಚನೆ ಮಾಡಿರುವುದಾಗಿ ದೂರಿದರು.

ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹಾಗೂ ದಿಗ್ವಿಜಯ್ ಸಿಂಗ್ ಅವರ ಸ್ವಾರ್ಥದಿಂದ ಈ ಸಂಪುಟ ಪುನಾರಚನೆ ಆಗಿದೆ. ಸಿದ್ದರಾಮಯ್ಯ ಸಣ್ಣತನವಿರುವ ಮನುಷ್ಯ. ಅವರ ಜೊತೆ ಮಾತು ಬಿಡಿ, ಮುಖ ನೋಡಲು ಇಷ್ಟವಿಲ್ಲ. ಸಚಿವ ಸ್ಥಾನದಿಂದ ನಾನು ಗೌರವದ ನಿವೃತ್ತಿ ಬಯಸಿದ್ದೆ. ಆದರೆ ಸಿದ್ದರಾಮಯ್ಯ ನನಗೆ ಸಂಧ್ಯಾಕಾಲದಲ್ಲಿ ಅವಮಾನ ಮಾಡಿಬಿಟ್ಟ ಎಂದು ಏಕವಚನದಲ್ಲಿ ಅಸಮಾಧಾನವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಅವರ ಬದಲಾವಣೆ ಅಗತ್ಯವಿದೆ ಎಂದ ಅವರು, ನನ್ನ ಪರಿಸ್ಥಿತಿ ಹೀಗಾಗಲು ಅವರೇ ಕಾರಣ ಎಂದು ನೇರ ಆರೋಪ ಮಾಡಿದರು.

Comments are closed.