ರಾಷ್ಟ್ರೀಯ

ಪಿಸ್ತೂಲ್ ತೋರಿಸಿ ಯುವತಿ ಮೇಲೆ ಅತ್ಯಾಚಾರಗೈದ ಕಾಮುಕರು ! ಆಕೆಯ ಗುಪ್ತಾಂಗಕ್ಕೆ ಪಿಸ್ತೂಲ್ ಹಾಗೂ ಮರದ ಚೂರುಗಳನ್ನು ಹಾಕಿದರು…

Pinterest LinkedIn Tumblr

bihar-rape

ಪಾಟ್ನಾ: 21 ವರ್ಷದ ಯುವತಿಯ ಮೇಲೆ ಬಿಹಾರದಲ್ಲಿ ಕ್ರೂರವಾಗಿ ಅತ್ಯಾಚಾರ ನಡೆದಿದೆ. ಬಿಹಾರದ ಮೊತಿಹರಿಯಲ್ಲಿ ಯುವತಿಯನ್ನು ಪಿಸ್ತೂಲ್ ತೋರಿಸಿ ಹೆದರಿಸಿ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಯುವತಿ ಮೇಲೆ ಹಲ್ಲೆ ನಡೆಸಿ ಗುಪ್ತಾಂಗದೊಳಗೆ ಗನ್ ಪಾಯಿಂಟ್ ಮತ್ತು ಮರದ ಚೂರುಗಳನ್ನು ಹಾಕಿ ಕ್ರೂರವಾಗಿ ಮಾನಭಂಗ ಮಾಡಲಾಗಿದೆ.

ಘಟನೆ ನಂತರ ಯುವತಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಅತ್ಯಾಚಾರದ ನಂತರ ಆರೋಪಿಯ ಕುಟುಂಬ ಸದಸ್ಯರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತ ಯುವತಿ ದೂರಿದ್ದಾಳೆ.

ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರೂ, ಆರೋಪಿ ವಿರುದ್ಧ ಇದುವರೆಗೂ ಪೊಲೀಸರು ಯಾವುದೇ ರೀತಿಯ ಕ್ರಮ ಜರುಗಿಸಲಿಲ್ಲವೆಂದು ಸಂತ್ರಸ್ತ ಯುವತಿಯ ತಂದೆ ಹೇಳಿದ್ದಾರೆ.

Comments are closed.