
ಮ೦ಗಳೂರು, ಜೂ.23: ದ.ಕ ಜಿಲ್ಲೆಯ ಪ್ರತಿ ತಾಲೂಕಿನ ಒಂದು ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಗ್ಯಾಸ್ ಇಲ್ಲದ ಪಡಿತರ ಚೀಟಿದಾರರಿಗೆ 2016ನೇ ಜೂನ್ ಮಾಹೆಯಿಂದ ಸೀಮೆಎಣ್ಣೆಯನ್ನು ಕೂಪನ್ ಮೂಲಕ ವಿತರಿಸುವ ಯೋಜನೆ ಜಾರಿಗೊಳಿಸಲಾಗಿದೆ.
ಮಂಗಳೂರು ತಾಲೂಕಿನ ಪಾಲಡ್ಕ, ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು, ಬೆಳ್ತಂಗಡಿ ತಾಲೂಕಿನ ಬಂದಾರು, ಸುಳ್ಯ ತಾಲೂಕಿನ ಅಜ್ಜಾವರ ಹಾಗೂ ಪುತ್ತೂರು ತಾಲೂಕಿನ ಕುಡಿಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ 7ನ್ಯಾಯಬೆಲೆ ಅಂಗಡಿಗಳ ಅಡುಗೆ ಅನಿಲ ಹೊಂದಿಲ್ಲದ ಕಾರ್ಡುದಾರರಿಗೆ ಗ್ರಾಮ ಪಂಚಾಯತುಗಳ ಮೂಲಕ ಸೀಮೆಎಣ್ಣೆ ಕೂಪನು ವಿತರಿಸಲಾಗುತ್ತಿ ದೆ. ಈ ವರೆಗೆ ಸೀಮೆಎಣ್ಣೆ ಕೂಪನು ಪಡೆದುಕೊಳ್ಳದಿರುವ ಅಡುಗೆ ಅನಿಲರಹಿತ ಪಡಿತರ ಚೀಟಿದಾರರಿಗೆ ಸೀಮೆಎಣ್ಣ್ಣೆ ಕೂಪನ್ ಪಡೆಯಲು ಜೂನ್ 25 ಕೊನೆಯ ದಿನ.
ಪಡಿತರದಾರರು ಸಂಬಂಧಪಟ್ಟ ಗ್ರಾಮ ಪಂಚಾಯತುಗಳಿಂದ ಸೀಮೆಎಣ್ಣೆ ಕೂಪನುಗಳನ್ನು ಪಡೆದುಕೊಳ್ಳುವಂತೆ ಸೂಚಿಸಿದೆ.
ಗ್ಯಾಸ್ ಹೊಂದಿ, ಸೀಮೆಎಣ್ಣೆ ಪಡೆದುಕೊಂಡಲ್ಲಿ ಪಡಿತರ ಚೀಟಿದಾರರೇ ಜವಾಬ್ದಾರರಾಗಿದ್ದು ಸೀಮೆಎಣ್ಣೆ ಕೂಪನ್ ಆಧಾರದಲ್ಲೇ ಜೂನ್ 30 ರೊಳಗೆ ಸೀಮೆಎಣ್ಣೆ ಪಡೆದುಕೊಳ್ಳುವಂತೆಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಕಟಣೆ ತಿಳಿಸಿದೆ.
Comments are closed.