
ಮುಂಬೈ: ವಿಶ್ವ ಮಟ್ಟದಲ್ಲಿ ಯೋಗದ ಮಹತ್ವವನ್ನು ಮನವರಿಕೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ. ಯೋಗವು ಎಲ್ಲ ರೋಗಕ್ಕೂ ಪರಿಹಾರ ನೀಡುತ್ತದೆ ಎಂಬುದು ಅಂತಾರಾಷ್ಟ್ರೀಯ ವೇದಿಕೆಯಲ್ಲೀಗ ಸಾಬೀತಾಗಿದ್ದು, ಅದರಿಂದ ನಮ್ಮನ್ನು ಕಾಡುತ್ತಿರುವ ಹಣದುಬ್ಬರ ಸಮಸ್ಯೆಗೆ ಪರಿಹಾರ ನೀಡುವುದೇ ಎಂದು ಪ್ರಶ್ನಿಸಿದೆ.
ಮೋದಿ ಅವರು ಯೋಗದಿಂದ ಜಗತ್ತಿನ 130 ರಾಷ್ಟ್ರಗಳು ಬಾಗಿ ಬಳುಕುವಂತೆ ಮಾಡಿದ್ದಾರೆ. ಅದೇ ರೀತಿ ಪಾಕಿಸ್ತಾನವನ್ನು ಮಲಗಿಸುವುದು ಯಾವಾಗ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಪ್ರಶ್ನಿಸಿದೆ.
ಪಾಕಿಸ್ತಾನದ ಅಟ್ಟಹಾಸವನ್ನು ಸಂಪೂರ್ಣವಾಗಿ ಮಣಿಸಿ ಅದು ಶವಾಸನದ ಸ್ಥಿತಿ ತಲುಪಲು ಯೋಗಕ್ಕಿಂತ ಶಸ್ತ್ರಾಸ್ತ್ರವೇ ಸೂಕ್ತ ಸಾಧನ. ನರೇಂದ್ರ ಮೋದಿ ಅವರು ಈ ಪ್ರಯೋಗಕ್ಕೆ ಮುಂದಾಗಲಿ ಎಂದು ಶಿವಸೇನೆ ಹೇಳಿದೆ.
ಯೋಗ ಎಂದೂ ಜಾತಿ-ಧರ್ಮದ ಸೂಚಕವಲ್ಲ. ಇದು ಆರೋಗ್ಯದ ಸೂತ್ರ ಎಂಬುದನ್ನು ಬಿಜೆಪಿಯೇತರ ಸರ್ಕಾರದ ಮುಖ್ಯಮಂತ್ರಿಗಲು ಅರ್ಥ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.
Comments are closed.