ರಾಷ್ಟ್ರೀಯ

ಸತತ ಆರು ತಿಂಗಳುಗಳಿಂದ ಪುತ್ರಿಯ ಮೇಲೆ ಅತ್ಯಾಚಾರವೆಸಗಿದ ಪಾಪಿ ತಂದೆ

Pinterest LinkedIn Tumblr

raಠಾಣೆ: ಕಳೆದ 11 ವರ್ಷ ವಯಸ್ಸಿನ ಪುತ್ರಿಯ ಮೇಲೆ ಆರು ತಿಂಗಳುಗಳಿಂದ ನಿರಂತರವಾಗಿ ಅತ್ಯಾಚಾರವೆಸಗಿದ ಆರೋಪದ ಮೇಲೆ ಕಾರ್ಮಿಕನಾದ 45 ವರ್ಷ ವಯಸ್ಸಿನ ಪಾಪಿ ತಂದೆಯನ್ನು ಭಿವಂಡಿ ಪ್ರದೇಶದಲ್ಲಿ ಬಂಧಿಸಲಾಗಿದೆ.

ಕಳೆದ ಆರು ತಿಂಗಳುಗಳಿಂದ ತಂದೆ ಅತ್ಯಾಚಾರವೆಸಗುತ್ತಿದ್ದರೂ ಸಹಿಸಿಕೊಂಡ ಪುತ್ರಿ, ಕೊನೆಗೂ ತಂದೆಯ ಲೈಂಗಿಕ ಕಿರುಕುಳ ಕಾಟ ತಾಳಲಾರದೆ ತಾಯಿಗೆ ಘೋರ ಸತ್ಯವನ್ನು ತಿಳಿಸಿದ್ದಾಳೆ.

ಪುತ್ರಿ ತನ್ನ ತಾಯಿಗೆ ಅತ್ಯಾಚಾರ ವಿಷಯ ತಿಳಿಸಿದ್ದರಿಂದ ಆಘಾತಗೊಂಡ ಪಾಪಿ ತಂದೆ ಪರಾರಿಯಾಗಿದ್ದಾನೆ. ಕೆಲ ದಿನಗಳು ಕಳೆದ ನಂತರ ಮರಳಿ ಮನೆಗೆ ಬಂದಾಗ ಆತನ ಪತ್ನಿ ಶಾಂತಿ ನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಪೊಲೀಸ್ ಮೂಲಗಳ ಪ್ರಕಾರ ಆರೋಪಿಗೆ ಮೂವರು ಪತ್ನಿಯರಿದ್ದಾರೆ. ಒಬ್ಬಳು ಔರಂಗಾಬಾದ್‌ನಲ್ಲಿದ್ದರೆ, ಮತ್ತೊಬ್ಬಳು ನಾಸಿಕ್‌ನಲ್ಲಿದ್ದಾಳೆ.ಮಗದೊಬ್ಬಳು( ಅತ್ಯಾಚಾರಕ್ಕೊಳಗಾದ ಬಾಲಕಿಯ ತಾಯಿ) ಭಿವಂಡಿಯಲ್ಲಿದ್ದಾಳೆ. ಪ್ರತಿನಿತ್ಯ ಬಾಲಕಿಯ ಮೇಲೆ ಅತ್ಯಾಚಾರವೆಸಗುತ್ತಿದ್ದು, ಯಾರಿಗಾದರೂ ಹೇಳಿದಲ್ಲಿ ಜೀವ ತೆಗೆಯುವುದಾಗಿ ಬೆದರಿಕೆಯೊಡ್ಡಿದ್ದನು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅತ್ಯಾಚಾರದ ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.

Comments are closed.