ಅಂತರಾಷ್ಟ್ರೀಯ

ಇಂಡೋನೇಷ್ಯದಲ್ಲಿ ಮಳೆ, ಭೂಕುಸಿತ : 50ಕ್ಕೇರಿದ ಸಾವಿನ ಸಂಖ್ಯೆ..!

Pinterest LinkedIn Tumblr

rrrಬನ್ಸೂಮಸ್(ಇಂಡೋನೇಷ್ಯ),ಜೂ.20- ಧಾರಾಕಾರವಾಗಿ ಸುರಿಯುತ್ತಿರುವ ಮಳೆ, ಭೂಕುಸಿತ, ಗುಡ್ಡಗಳ ಮೇಲಿಂದ ಬೀಳುತ್ತಿರುವ ಕಲ್ಲುಬಂಡೆಗಳು ಹಾಗೂ ಮಣ್ಣಿನಿಂದಾಗಿ ಇಂಡೋನೇಷ್ಯದಲ್ಲಿ ಮೃತಪಟ್ಟವರ ಸಂಖ್ಯೆ 50 ದಾಟಿದೆ. ಸಾವಿರಾರು ಮನೆಗಳು ನೆಲಸಮವಾಗಿವೆ. ಇಡೀ ಪ್ರದೇಶ ಜಲಾವೃತವಾಗಿದೆ ಎಂದು ಮೂಲಗಳು ತಿಳಿಸಿವೆ. 19 ಹಳ್ಳಿಗಳು ಜಲಾವೃತ್ತವಾಗಿದ್ದು ನೂರಾರು ಮಂದಿ ರಕ್ಷಣಾ ಕಾರ್ಯಕರ್ತರು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇದುವರೆಗೆ 50ಕ್ಕೂ ಹೆಚ್ಚು ಮೃತದೇಹಗಳು ದೊರೆತಿದ್ದು , ಇನ್ನೂ ಶೋಧ ಕಾರ್ಯ ಮುಂದುವರೆದಿದೆ.

ಗುಡ್ಡಗಳ ಇಳಿಜಾರು ಪ್ರದೇಶಗಳಲ್ಲಿರುವ ಹಳ್ಳಿಗಳು ಹೆಚ್ಚಿನ ರೀತಿಯಲ್ಲಿ ಹಾಳಾಗಿವೆ. ಸಾವಿರಾರು ನಿರಾಶ್ರಿತರಾಗಿ ಸಂತ್ರಸ್ತರ ಶಿಬಿರಗಳನ್ನು ತೆರೆಯಲಾಗಿದೆ. ಇನ್ನೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Comments are closed.