ರಾಷ್ಟ್ರೀಯ

ಭಾರತಕ್ಕೆ ಬಂದ ಎಫ್​ಡಿಐ 5500 ಕೋಟಿ ಡಾಲರ್-ಸುಷ್ಮಾ

Pinterest LinkedIn Tumblr

19-Sushma-webನವದೆಹಲಿ: ಕಳೆದ ಎರಡು ವರ್ಷದಲ್ಲಿ ಭಾರತಕ್ಕೆ 55 ಬಿಲಿಯನ್ (5500 ಕೋಟಿ) ಡಾಲರ್ ಮೌಲ್ಯದ ವಿದೇಶೀ ನೇರ ಹೂಡಿಕೆ (ಎಫ್ಡಿಐ) ಹರಿದು ಬಂದಿದ್ದು, ಶೇಕಡಾ 43ರಷ್ಟು ಏರಿಕೆಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಭಾನುವಾರ ಇಲ್ಲಿ ಹೇಳಿದರು.

ಪ್ರಸ್ತುತ ವರ್ಷದಲ್ಲೇ ಭಾರತವು ಪರಮಾಣು ಸರಬರಾಜುದಾರರ ಸಮೂಹಕ್ಕೆ (ಎನ್ಎಸ್ಜಿ) ಸೇರ್ಪಡೆಗೊಳ್ಳುವುದನ್ನು ಖಾತರಿ ಪಡಿಸಿಕೊಳ್ಳಲು ಭಾರತ ಯತ್ನಿಸುತ್ತಿದೆ ಎಂದು ಅವರು ನುಡಿದರು.

ಪಾಕಿಸ್ತಾನದ ಜೊತೆಗೆ ಇತ್ಯರ್ಥ ಪಡಿಸಿಕೊಳ್ಳಬೇಕಾದ ಕ್ಲಿಷ್ಟಕರ ವಿಷಯಗಳು ನಮ್ಮ ಮುಂದಿವೆ. ಪ್ರಸ್ತುತ ಉಭಯ ರಾಷ್ಟ್ರಗಳ ಮಧ್ಯೆ ಸಮಾಧಾನ, ಪ್ರೀತಿಪೂರ್ಣ ಬಾಂಧವ್ಯ ಇದೆ ಎಂದು ಅವರು ಹೇಳಿದರು.

ಪಠಾಣ್ಕೋಟ್ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಕಡೆಯಿಂದ ಬಿಗಿ ಕ್ರಮವನ್ನು ನಾವು ನಿರೀಕ್ಷಿಸುತ್ತಿದ್ದೇವೆ. ರಾಷ್ಟ್ರೀಯ ತನಿಖಾ ಸಂಸ್ಥೆ ಭೇಟಿಯ ಪ್ರಸ್ತಾಪವನ್ನು ಪಾಕಿಸ್ತಾನ ತಳ್ಳಿಹಾಕಿಲ್ಲ, ಆದರೆ ಇನ್ನಷ್ಟು ಕಾಲಾವಕಾಶ ಕೇಳಿದೆ ಎಂದು ಸ್ವರಾಜ್ ನುಡಿದರು.

Comments are closed.