ಕರ್ನಾಟಕ

ಸರಕಾರಕ್ಕೆ 5 ಲಕ್ಷ ನೀಡುತ್ತೇವೆ, ಆನೆ ಕೊಲ್ಲಲು ಅನುಮತಿ ನೀಡಿ

Pinterest LinkedIn Tumblr

19NPK2ಕಳೆದ ಒಂದು ತಿಂಗಳಿನಿಂದ ಚೇಲಾವರ ಗ್ರಾಾಮದಲ್ಲಿ ಸಂಚರಿಸುತ್ತಿಿರುವ ಕಾಡಾನೆ ಹಿಂಡು ಗ್ರಾಾಮದಲ್ಲಿ ಸುಮಾರು 50 ಲಕ್ಷ ರು. ಬೆಳೆ ನಷ್ಟ ಮಾಡಿದೆ. ಮೂರು ದಿನಗಳಲ್ಲಿ ಮುಂಡ್ಯೋೋಳಂಡ ಕುಟುಂಬಸ್ಥರ ಸುಮಾರು 10 ಲಕ್ಷಕ್ಕೂ ಮೀರಿದ ಬೆಳೆ ನಷ್ಟ ಮಾಡಿರುವ ಹಿನ್ನೆೆಲೆಯಲ್ಲಿ ರೊಚ್ಚಿಿಗೆದ್ದ ಗ್ರಾಾಮಸ್ಥರು ಅರಣ್ಯ ಇಲಾಖೆ ವಾಹನವನ್ನು ಕೆಲಕಾಲ ದಿಗ್ಭಂದನಕ್ಕೆೆ ಒಳಪಡಿಸಿ ಹಿರಿಯ ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋೋಶ ವ್ಯಕ್ತಪಡಿಸಿದ್ದರು.
ಒಂದು ಆನೆಗೆ 5 ಲಕ್ಷ?
ಕಾಡಾನೆ ದಾಳಿಗೆ ಸಿಕ್ಕಿಿ ಮೃತಪಟ್ಟ ವ್ಯಕ್ತಿಿ ಕುಟುಂಬಕ್ಕೆೆ 5 ಲಕ್ಷ ರು. ಪರಿಹಾರವನ್ನು ಸರಕಾರ ನೀಡುತ್ತಿಿದೆ. ಆದರೆ ನಾವು ಒಂದು ಆನೆಗೆ ಐದು ಲಕ್ಷ ರು. ಸರಕಾರಕ್ಕೆೆ ಪಾವತಿಸುತ್ತೇವೆ. ಆನೆಯನ್ನು ಕೊಲ್ಲಲು ನಮಗೆ ಅನುಮತಿ ನೀಡಿ ಎಂಬ ವಿನೂತನ ಬೇಡಿಕೆಯನ್ನು ಗ್ರಾಾಮಸ್ಥರು ಸರಕಾರಕ್ಕೆೆ ಸಲ್ಲಿಸಿದರು.
ಕ್ಯಾಾರೇ ಅನ್ನದ ಅರಣ್ಯ ಇಲಾಖಾಧಿಕಾರಿಗಳು:
ಕಳೆದ ಒಂದು ತಿಂಗಳಿನಿಂದಲೂ ಕಾಡಾನೆ ಹಾವಳಿ ಬಗ್ಗೆೆ ಅರಣ್ಯಾಾಧಿಕಾರಿಗಳಿಗೆ ಮಾಹಿತಿ ನೀಡಿದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮೇಲಾಧಿಕಾರಿಗಳ ಅಣತಿಯಂತೆ ಸ್ಥಳಕ್ಕೆೆ ಭೇಟಿ ನೀಡುವ ಸಿಬ್ಬಂದಿ ಕಾಡಾನೆ ದಾಳಿಯಿಟ್ಟ ಸ್ಥಳ ಪರಿಶೀಲಿಸಿ ಮರಳುತ್ತಿಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಾಗುತ್ತಿಿಲ್ಲ ಎಂದು ಗ್ರಾಾಮಸ್ಥರು ಆರೋಪಿಸಿದ್ದಾರೆ.
ಪರಿಹಾರ ನೀಡಬೇಕು:
ಕಾಡಾನೆಯಿಂದ ನಷ್ಟ ಸಂಭವಿಸಿದ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು. ಇದು ಆನೆ ಓಡಿಸುವ ಸಂದರ್ಭದಲ್ಲಿ ಸ್ಥಳದಲ್ಲೇ ನೀಡುವಂತಾಗಬೇಕು. ಈವರೆಗೆ ನೀಡಿದ ಪರಿಹಾರದಲ್ಲಿ ಅರ್ಜಿ ಸಲ್ಲಿಸಲು ವೆಚ್ಚವಾದ ಹಣದ ಮೊತ್ತ ಕೂಡ ಇಲ್ಲದಂತಾಗಿದೆ. ನಷ್ಟಕ್ಕೆೆ ಸರಿಯಾದ ಪರಿಹಾರ ದೊರೆಯದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಾಮಸ್ಥರು ಎಚ್ಚರಿಸಿದ್ದಾರೆ.
ಕಾಡಾನೆಗಳನ್ನು ಸ್ಥಳಾಂತರಿಸಬೇಕು:
ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯದಿಂದ ಯಾವುದೇ ಪ್ರಯೋಜನವಿಲ್ಲ. ಕಾಡಾನೆ ಹಿಂಡಿನೊಂದಿಗೆ ಮರಿಯಾನೆಗಳು ಇರುವ ಕಾರಣ ಇವನ್ನು ಈ ಸ್ಥಳದಿಂದ ಓಡಿಸಲು ಸಾಧ್ಯವಾಗುವುದಿಲ್ಲ. ಆದುದರಿಂದ ಅರಣ್ಯ ಇಲಾಖೆ ಸಾಕಾನೆಗಳ ಸಹಾಯದಿಂದ ಇವುಗಳನ್ನು ಸೆರೆ ಹಿಡಿದು ಬೇರೆಡೆಗೆ ಸಾಗಿಸಬೇಕೆಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
40 ಆನೆಗಳು?:
ಬೆಟ್ಟದಲ್ಲಿ ವಾಸಿಸುವ ಆನೆಗಳನ್ನು ಹೊರತುಪಡಿಸಿ ಕರಡ, ಚೆಯ್ಯಂಡಾಣೆ, ಚೇಲಾವರ, ಮರಂದೋಡ, ಯವಕಪಾಡಿ, ನಾಲಡಿ ಗ್ರಾಾಮಗಳಲ್ಲಿ ಸುಮಾರು 40 ಕಾಡಾನೆಗಳು ಬೀಡು ಬಿಟ್ಟಿಿರುವ ಬಗ್ಗೆೆ ತಿಳಿದು ಬಂದಿದೆ. ಈ ಕಾಡಾನೆಗಳೊಂದಿಗೆ ಮರಿಯಾನೆಗಳು ಕೂಡ ಇರುವ ಕಾರಣ ಸಾರ್ವಜನಿಕರು ಹೆಚ್ಚಿಿನ ಆತಂಕದಿಂದಿದ್ದಾರೆ. ಇವು ರಾತ್ರಿಿಯಾದಂತೆ ರಸ್ತೆೆಗಳಲ್ಲಿ ಓಡಾಡುತ್ತಿಿದ್ದು, ಜನ ಸಾಮಾನ್ಯರು, ವಾಹನಗಳು ರಸ್ತೆೆಯಲ್ಲಿ ಓಡಾಡದ ಪರಿಸ್ಥಿಿತಿ ನಿರ್ಮಾಣವಾಗಿದೆ. ಚೇಲಾವರ ಬೆಟ್ಟಕ್ಕೆೆ ತೆರಳುವ ಪ್ರವಾಸಿಗರು ಹಿಂದಿರುಗುವಾಗ ಸ್ವಲ್ಪ ತಡವಾದರೂ ರಸ್ತೆೆಯಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿಿರುವ ಬಗ್ಗೆೆ ತಿಳಿದು ಬಂದಿದೆ ಎಂದು ತಿಳಿಸಿದರು.
ಅರಣ್ಯ ಸಿಬ್ಬಂದಿಗೆ ದಿಗ್ಬಂಧನ:
ಕಾಡಾನೆ ಹಾವಳಿ ಬಗ್ಗೆೆ ಗ್ರಾಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಬೆಳಗ್ಗೆೆ 10.30ಕ್ಕೆೆ ಸುಮಾರಿಗೆ ಅರಣ್ಯ ಇಲಾಖಾ ವಾಹನ ಸ್ಥಳಕ್ಕೆೆ ಆಗಮಿಸಿತ್ತಾಾದರೂ, ವಾಹನದಲ್ಲಿ ಹಿರಿಯ ಅಧಿಕಾರಿಗಳು ಇಲ್ಲದ ಕಾರಣ ರೊಚ್ಚಿಿಗೆದ್ದ ಗ್ರಾಾಮಸ್ಥರು ವಾಹನಕ್ಕೆೆ ದಿಗ್ಬಂಧನ ಹಾಕಿದರು.ಹಿರಿಯ ಅಧಿಕಾರಿಗಳು ಸ್ಥಳಕ್ಕೆೆ ಆಗಮಿಸದೇ ವಾಹನವನ್ನು ಹಿಂದಿರುಗಲು ಬಿಡುವದಿಲ್ಲ ಎಂದು ಪಟ್ಟುಹಿಡಿದರು. ಕೆಲ ಸಮಯದ ನಂತರ ತಮ್ಮಿಿಂದ ತಾನೆ ಸಮಾಧಾನಗೊಂಡ ಗ್ರಾಾಮಸ್ಥರು ಹಿರಿಯ ಅಧಿಕಾರಿಗಳ ಬೇಜವಾಬ್ದಾಾರಿ ತನಕ್ಕೆೆ ಸಿಬ್ಬಂದಿಯನ್ನು ಕಷ್ಟಗೀಡು ಮಾಡುವುದು ಸರಿಯಲ್ಲ. ಬರುವ ಮಂಗಳವಾರದವರೆಗೆ ಆನೆಗಳನ್ನು ಈ ಪ್ರದೇಶಗಳಿಂದ ಸ್ಥಳಾಂತರಿಸದಿದ್ದರೆ ಅರಣ್ಯ ಇಲಾಖಾ ಕಚೇರಿ ಮುಂದೆ ಧರಣಿ ನಡೆಸುವದಾಗಿ ಎಚ್ಚರಿಕೆ ನೀಡಿ ವಾಹನವನ್ನು ಬಂಧನ ಮುಕ್ತಗೊಳಿಸಿದರು.
ಆನೆ ಹತ್ಯೆೆಗೆ ಪರವಾನಗಿ ನೀಡಬೇಕು:
ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಕಾಡಾನೆ ಹಾವಳಿ ಬಗ್ಗೆೆ ಗಂಭೀರ ಚರ್ಚೆ ನಡೆಸುವುದರ ಮೂಲಕ ಕೃಷಿಕರಿಗೆ ಉಪಟಳ ನೀಡುತ್ತಿಿರುವ ಕಾಡಾನೆಗಳನ್ನು ಹತ್ಯೆೆ ಮಾಡಲು ಸರಕಾರ ಪರವಾನಗಿ ನೀಡಬೇಕು ಎಂದು ಗ್ರಾಾಮಸ್ಥರು ಒತ್ತಾಾಯಿಸಿದ್ದಾರೆ. ಇದಕ್ಕೆೆ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಒಗ್ಗಟ್ಟಿಿನಿಂದ ಒತ್ತಾಾಯಿಸಬೇಕೆಂದು ಆಗ್ರಹಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ, ನರಿಯದಂಡ ಗ್ರಾಾಮ ಪಂಚಾಯಿತಿ ಉಪಾಧ್ಯಕ್ಷ ಮುಂಡ್ಯೋೋಳಂಡ ರವಿ ಸೋಮಣ್ಣ, ಸದಸ್ಯರಾದ ಬೆಳಿಯಂಡ್ರ ರತೀಶ್ ಕುಮಾರ್, ಕೋಡಿರ ಪ್ರಸನ್ನ ಸೇರಿದಂತೆ ಮುಂಡ್ಯೋೋಳಂಡ ಕುಟುಂಬಸ್ಥರು, ಗ್ರಾಾಮಸ್ಥರು ಇದ್ದರು.

ಕಾಡಾನೆ ಹಾವಳಿ ಬಗ್ಗೆೆ ಜಿಲ್ಲಾ ಅರಣ್ಯಾಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯವನ್ನು ಇಲಾಖೆ ಕೂಡಲೇ ಕೈಗೊಳ್ಳಬೇಕಾಗಿದೆ. ಕಾಡಾನೆಗಳಿಂದ ನಷ್ಟ ಸಂಭವಿಸಿದ ಬೆಳೆಗಾರರಿಗೆ ಸೂಕ್ತ ಪರಿಹಾರವನ್ನು ಕೂಡಲೇ ನೀಡಬೇಕು. ತಪ್ಪಿಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವದು.
ನೆಲ್ಲಚಂಡ ಕಿರಣ್ ಕಾರ್ಯಪ್ಪ, ಜಿಪಂ ಸದಸ್ಯ

ಪರಿಸ್ಥಿಿತಿಯ ಬಗ್ಗೆೆ ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ. ಕಾಡಾನೆಯಿಂದ ನಷ್ಟ ಸಂಭವಿಸಿದ ಬೆಳೆಗಾರರಿಂದ ಪರಿಹಾರ ಅರ್ಜಿ ಪಡೆದುಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಅವರ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಜಟ್ಟಪ್ಪ, ಉಪ ವಲಯ ಅರಣ್ಯಾಾಧಿಕಾರಿ

Comments are closed.