ಕರ್ನಾಟಕ

ಧಾರವಾಡ: ಜಿಮ್ ನೊಳಗೆ ನುಗ್ಗಿ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯನ ಭೀಕರ ಹತ್ಯೆ

Pinterest LinkedIn Tumblr

bjp-zp

ಧಾರವಾಡ: ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಕ್ಷೇತ್ರದ ಬಿಜೆಪಿ ಸದಸ್ಯರೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ಯೋಗೀಶ್ ಗೌಡರ್(25) ಕೊಲೆಯಾದ ಜಿಲ್ಲಾ ಪಂಚಾಯತ್ ಸದಸ್ಯ. ಧಾರಾವಾಡದ ಸಪ್ತಾಪುರ ಬಳಿಯ ಜಿಮ್‍ನಲ್ಲಿ ಈ ಕೊಲೆನಡೆದಿದ್ದು, ಐವರು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಹೆಬ್ಬಳ್ಳಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಬಿಜೆಪಿ ಸದಸ್ಯನಾಗಿದ್ದ ಯೋಗೇಶ್, ಪಂಚಾಯತ್ ಚುನಾವಣೆ ದಿನವೇ ಜೈಲಿಗೆ ಹೋಗಿದ್ದರು. ಅಲ್ಲದೇ 10 ವರ್ಷಗಳ ಹಿಂದೆ ಯೋಗೀಶ್ ಅಣ್ಣ ಉದಯ್ ಗೌಡರ್ ಅವರನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ, ಗುಂಡಿಕ್ಕಿ ಕೊಲೆ ಮಾಡಲಾಗಿತ್ತು.

ಹೇಗಾಯ್ತು ಘಟನೆ?: ಇಂದು ಮುಂಜಾನೆ ಯೋಗೀಶ್ ಜಿಮ್ ಹೋಗಿದ್ದಾಗ ಈ ಘಟನೆ ನಡೆದಿದ್ದು, ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ. ಈ ಸಂಬಂಧ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ಯೋಗೀಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Comments are closed.