ರಾಷ್ಟ್ರೀಯ

‘ಡಿಯರ್’ ಸ್ಮೃತಿ ಇರಾನಿ ಜೀ ಎಂದಿದ್ದಕ್ಕೆ ಬಿಹಾರ ಸಚಿವನ ವಿರುದ್ಧ ಟ್ವಿಟರ್ ಸಮರಕ್ಕಿಳಿದ ಇರಾನಿ

Pinterest LinkedIn Tumblr

ashok-smriti

ನವದೆಹಲಿ: ಡಿಯರ್ ಸ್ಮೃತಿ ಇರಾನಿ ಜೀ ಎಂದ ಬಿಹಾರ ಶಿಕ್ಷಣ ಸಚಿವನ ವಿರುದ್ಧ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿಯವರು ಕಿಡಿಕಾರಿದ್ದಾರೆ.

ನಿನ್ನೆಯಷ್ಟೇ ಇರಾನಿಗೆ ಟ್ವೀಟ್ ಮಾಡಿದ್ದ ಬಿಹಾರ ಶಿಕ್ಷಣ ಸಚಿವ ಅಶೋಕ್ ಚೌಧರಿ ಅವರು, ಡಿಯರ್ ಸ್ಮೃತಿ ಇರಾನಿಯವರೇ, ಹೊಸ ಶಿಕ್ಷಣ ನೀತಿಯನ್ನು ಯಾವಾಗ ಜಾರಿಗೆ ತರುತ್ತೀರಿ? 2015 ನೇ ಶೈಕ್ಷಣಿಕ ವರ್ಷ ನಿಮ್ಮ ಕ್ಯಾಲೆಂಡರಿನ ಪ್ರಕಾರ ಯಾವಾಗ ಮುಗಿಯುತ್ತದೆ ಎಂದು ಹೇಳಿದ್ದರು.

ಬಿಹಾರ ಶಿಕ್ಷಣ ಸಚಿವರು ಡಿಯರ್ ಪದ ಬಳಕೆ ಮಾಡಿದ್ದಕ್ಕೆ ಕಿಡಕಾರಿದ್ದ ಸ್ಮೃತಿ ಇರಾನಿಯವರು, ಚೌಧರಿಯವರೇ…ಮಹಿಳೆಯರಿಗೆ ‘ಡಿಯರ್’ ಎಂದು ಕರೆಯುವುದನ್ನು ನೀವು ಯಾವಾಗ ಕಲಿತಿದ್ದೀರಿ..? ಎಂದು ಹೇಳಿದ್ದಾರೆ.

ಇದಕ್ಕುರಿಸಿರುವ ಚೌಧರಿಯವರು, ನಾನು ಅಗೌರವ ನೀಡಿಲ್ಲ. ವಿದ್ಯಾವಂತನಾಗಿ ಮಾತನಾಡಿದ್ದೇನೆ. ವೃತ್ತಿಪರ ಇಮೇಲ್ ಗಳಿ ಡಿಯರ್ ಎಂಬುದರಿಂದಲೇ ಆರಂಭವಾಗುತ್ತದೆ. ನಾನು ಬಳಸಿರುವ ಪದ ಪ್ರಯೋಗವನ್ನು ದೊಡ್ಡ ವಿಚಾರ ಮಾಡುವ ಮೊದಲು ಕೇಳಿದ ಪ್ರಶ್ನೆಗೆ ಸಮಜಾಯಿಷಿ ನೀಡಿ ಎಂದು ಹೇಳಿದ್ದಾರೆ.

ಇನ್ನು ಈ ಇಬ್ಬರು ಸಚಿವರ ಟ್ವಿಟರ್ ಸಮರಕ್ಕೆ ಜನ ಕೂಡ ಸಾಥ್ ನೀಡಿದ್ದು, ಕೆಲವರು ಚೌಧರಿ ಪರವಾಗಿ ನಿಂತಿದ್ದರೆ, ಮತ್ತೆ ಕೆಲವರು ಸ್ಮೃತಿ ಇರಾನಿ ಪರವಾಗಿ ಟ್ವಿಟರ್ ನಲ್ಲಿ ಸಮರ ಸಾರಿದ್ದಾರೆ.

Comments are closed.