ಕರ್ನಾಟಕ

ಮೈಸೂರು: ಶವಸಂಸ್ಕಾರದ ವೇಳೆ ಸತ್ತ ಮಹಿಳೆಗೆ ಮರುಜೀವ!

Pinterest LinkedIn Tumblr

Womenಮೈಸೂರು: ಮೃತಪಟ್ಟಿದ್ದ ಮಹಿಳೆಯ ಶವಸಂಸ್ಕಾರ ನಡೆಸುತ್ತಿದ್ದ ವೇಳೆಯೇ ಮತ್ತೆ ಮರುಜೀವ ಬಂದ ಅಚ್ಚರಿಯ ಘಟನೆ ಮೈಸೂರು ನಗರದ ಅಗ್ರಹಾರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಮೈಸೂರಿನ ಪದ್ಮಾ ಲೋಡಾ ಎಂಬ ಮಹಿಳೆಯನ್ನು ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿರುವುದಾಗಿ ಮೇ 15ರಂದು ವೈದ್ಯರು ತಿಳಿಸಿದ್ದರು ಎಂದು ಟಿವಿ9 ವರದಿ ತಿಳಿಸಿದೆ.

ಮಂಗಳವಾರ ಪದ್ಮಾ ಲೋಡಾ ಅವರ ಶವಸಂಸ್ಕಾರ ನಡೆಸುತ್ತಿದ್ದ ವೇಳೆ ಕಣ್ಣು ಬಿಟ್ಟಿರುವ ಅಚ್ಚರಿಯ ಘಟನೆ ನಡೆದಿದೆ. ಮರು ಜೀವ ಪಡೆದ ಪದ್ಮಾರನ್ನು ಕೂಡಲೇ ಮತ್ತೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ವಿವರಿಸಿದೆ.
-ಉದಯವಾಣಿ

Comments are closed.