ಮನೋರಂಜನೆ

ಮೂರನೇ ವಾರದಲ್ಲೂ ಜನಸಾಗರ ಖುಷಿಖುಷಿ ಅಕಿರ

Pinterest LinkedIn Tumblr

Akiraಅನೀಶ್‌ತೇಜಶ್ವರ್‌ ಈಗ ಮತ್ತಷ್ಟು ಹ್ಯಾಪಿಯಾಗಿದ್ದಾರೆ. ಅವರ ಆ ಅತೀವ ಖುಷಿಗೆ ಕಾರಣ, “ಅಕಿರ’. ಹೌದು, ಮೂರನೇ ವಾರವೂ “ಅಕಿರ’ ಹೌಸ್‌ಫ‌ುಲ್‌ ಪ್ರದರ್ಶನ ಕಾಣುತ್ತಿದೆ. ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಹೀಗಾಗಿ ಅನೀಶ್‌ ಮಾತ್ರವಲ್ಲ, ಇಡೀ ಚಿತ್ರತಂಡ ಕೂಡ ಸಖತ್‌ ಖುಷಿಯ ಮೂಡ್‌ನ‌ಲ್ಲಿದೆ. ಬಿಸಿ ಸೆಂಟರ್‌ಗಳಲ್ಲೂ ಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಎಲ್ಲೆಡೆಯಿಂದಲೂ ಚಿತ್ರವನ್ನು ಕೇಳುತ್ತಿದ್ದಾರೆ ಎಂದು ವಿವರ ಕೊಡುವ ನಟ ಅನೀಶ್‌ ತೇಜಶ್ವರ್‌, ಮೇ 26 ರಂದು ವಿದೇಶದಲ್ಲೂ ಚಿತ್ರ ರಿಲೀಸ್‌ ಆಗುತ್ತಿದೆ. ಈಗಾಗಲೇ ಸೆವೆನ್‌ ಹಿಲ್ಸ್‌ ಎಂಬ ದೊಡ್ಡ ಕಂಪೆನಿಯೂ ವಿದೇಶಗಳಲ್ಲಿ ರಿಲೀಸ್‌ ಮಾಡುವ ಜವಾಬ್ದಾರಿ ವಹಿಸಿಕೊಂಡಿದೆ ಎಂದು ಹೇಳುತ್ತಾರೆ ಅನೀಶ್‌.

ಇದೇ ಭಾನುವಾರ ಸೆಲೆಬ್ರೆಟಿಸ್‌ ಪ್ರದರ್ಶನ ಏರ್ಪಡಿಸಲಾಗಿದ್ದು, ಇಂಡಸ್ಟ್ರಿಯಿಂದ ಸಿನಿಮಾ ನೋಡಬೇಕು ಎಂಬ ಬೇಡಿಕೆ ಇತ್ತು. ಹಾಗಾಗಿ, ಎಲ್ಲರಿಗೂ ಭಾನುವಾರ ಒರಾಯಿನ್‌ ಮಾಲ್‌ನಲ್ಲಿ ಚಿತ್ರಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಇನ್ನು, ರಾಜ್ಯಾದ್ಯಂತ ಚಿತ್ರತಂಡ ಸಂಚಾರ ಮಾಡಿ, ಚಿತ್ರದ ಪ್ರಚಾರ ಕಾರ್ಯ ಶುರುವಿಟ್ಟುಕೊಂಡಿತ್ತು. ಈ ವಾರ ಗ್ಯಾಪ್‌ ಕೊಟ್ಟು, ಪುನಃ ಸಂಚರಿಸುವ ಯೋಚನೆ ಇದೆ.

ನಿರ್ಮಾಪಕರು ಈಗಾಗಲೇ ಎಲ್ಲೆಡೆ ಪ್ರಚಾರವನ್ನು ಜೋರಾಗಿಯೇ ಮಾಡಿದ್ದಾರೆ. ನಮ್ಮ ಚಿತ್ರ ಇಂದು
ಎಲ್ಲರಿಗೂ ತಲುಪಿದೆ ಎಂದರೆ, ಅದು ಪ್ರಚಾರದಿಂದ ಮಾತ್ರ. ಇನ್ನೊಂದು ವಿಶೇಷವೆಂದರೆ, ಚಿತ್ರಕ್ಕೆ
ರಿಪೀಟ್‌ ಆಡಿಯನ್ಸ್‌ ಬರುತ್ತಿದ್ದಾರೆ. ಚಿತ್ರ ನೋಡಿ ಹೊರಬಂದವರು, ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ.

ಎಂದಿನಂತೆಯೇ ಚಿತ್ರದ ಗಳಿಕೆ ಕೂಡ ಜೋರಾಗಿಯೇ ಇದೆ. ಮಲ್ಟಿಪ್ಲೆಕ್ಸ್‌ನಲ್ಲೂ ಚಿತ್ರ ಒಳ್ಳೆಯ ಗಳಿಕೆಯಲ್ಲಿದೆ. ಎಲ್ಲೂ ಕೂಡ ಕಲೆಕ್ಷನ್‌ ಡೌನ್‌ ಆಗಿಲ್ಲ. ರಿಪೀಟ್‌ ಆಡಿಯನ್ಸ್‌ ಚಿತ್ರಕ್ಕೆ ಬರುತ್ತಿರುವುದೇ ವಿಶೇಷ ಎನ್ನುತ್ತಾರೆ ಅನೀಶ್‌ ತೇಜಶ್ವರ್‌. ಸದ್ಯಕ್ಕೆ ಸ್ವಲ್ಪ ಟೆನ್ಶನ್‌ ಕಡಿಮೆಯಾಗಿದೆ. ಆರಂಭದಿಂದಲೂ ಚಿತ್ರದ ಬಗ್ಗೆ ನಂಬಿಕೆ ಇತ್ತು.

ಆದರೆ, ಜನರು ಹೇಗೆ ಸ್ವೀಕರಿಸುತ್ತಾರೆ ಎಂಬ ಭಯವಿತ್ತು. ಈಗ ನೋಡಿದರೆ, ಜನರಿಂದ ಉತ್ತಮ
ಪ್ರತಿಕ್ರಿಯೆ ಸಿಕ್ಕಿದೆ. ಇದೇ ರೇಂಜ್‌ನಲ್ಲಿ ಹೋದರೆ, ಚಿತ್ರ ಸಲೀಸಾಗಿ 50 ದಿನಗಳನ್ನು ಪೂರೈಸಲಿದೆ. ಈ
ವಾರ ಬೇರೆ ಚಿತ್ರಗಳು ತೆರೆಕಂಡರೂ ಸಹ, “ಅಕಿರ’ ಚಿತ್ರಕ್ಕೆ ಯಾವುದೇ ಸಮಸ್ಯೆಯಾಗಲಿಲ್ಲ. ಅದು
ಚಿತ್ರದ ಮತ್ತೂಂದು ಪ್ಲಸ್‌ ಪಾಯಿಂಟ್‌. ಮೊನ್ನೆ ಕೂಡ ವೀರೇಶ್‌ ಚಿತ್ರಮಂದಿರದಲ್ಲಿ ಶೇ.90 ರಷ್ಟು
ಹೌಸ್‌ಫ‌ುಲ್‌ ಆಗಿತ್ತು. ಇದಕ್ಕಿಂತ ಖುಷಿಯ ವಿಷಯ ಬೇರೊಂದಿಲ್ಲ ಎಂಬುದು ಅನೀಶ್‌ ತೇಜಶ್ವರ್‌.
“ಅಕಿರ’ ಬಿಡುಗಡೆಯಾಗಿ ಇದುವರೆಗೆ 3.50 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿದೆ. ಅದು
ವಿಶೇಷ. ಚಿತ್ರದ ನಿರ್ಮಾಪಕ ಚೇತನ್‌ ಅವರು ಈಗ ಇನ್ನೊಂದು ವಿಷಯಕ್ಕೂ ಸುದ್ದಿಯಾಗಿದ್ದಾರೆ.

ಯಶ್‌ ಸ್ಥಾಪಿಸಿದ ಯಶೋಮಾರ್ಗ ಫೌಂಡೇಷನ್‌ ಗೆ ನಿರ್ಮಾಪಕ ಚೇತನ್‌ ಅವರು ಹತ್ತು ಲಕ್ಷ ರೂ.
ಗಳನ್ನು ಈಗಾಗಲೇ ಕೊಟ್ಟಿದ್ದಾಗಿದೆ. ಯಶ್‌ ಕೂಡ ನಿರ್ಮಾಪಕರ ಕಾರ್ಯವನ್ನು ಶ್ಲಾ ಸಿದ್ದಾರೆ. ಅದೇನೆ
ಇರಲಿ, ಅನೀಶ ತೇಜಶ್ವರ್‌ ಈ ಹಿಂದೆ, ಅನೇಕ ಚಿತ್ರಗಳನ್ನು ಕೊಟ್ಟಿದ್ದರೂ ಅದು “ಅಕಿರ’ ಚಿತ್ರದ
ಮಟ್ಟಕ್ಕೆ ಸುದ್ದಿಯಾಗಿರಲಿಲ್ಲ. ಈಗ ಎಲ್ಲೇ ಹೋದರೂ ಅವರನ್ನು “ಅಕಿರ’ ಚಿತ್ರದ ಹೀರೋ ಅಂತ ಗುರುತಿಸಿ, ಆ ಚಿತ್ರದ ಬಗ್ಗೆ ಮಾತಾಡುತ್ತಿದ್ದಾರಂತೆ. ಅವರಿಗೆ ಅದಕ್ಕಿಂತ ಖುಷಿ ಮತ್ತೂಂದಿಲ್ಲ.

ನಿರ್ಮಾಪಕ ಚೇತನ್‌ ಅವರಿಗೆ “ಅಕಿರ’ ಎಲ್ಲರಿಗೂ ತಲುಪಿರುವುದಕ್ಕೆ ಖುಷಿಯಾಗಿದೆಯಂತೆ. ಒಳ್ಳೆಯ
ಪ್ರಯತ್ನಕ್ಕೆ ಎಂದಿದ್ದರೂ ಒಳ್ಳೆಯ ಫ‌ಲ ಸಿಗುತ್ತದೆ ಎಂದು ಅವರು ನಂಬಿದ್ದರಂತೆ. ಅದು ಈ ಚಿತ್ರದ
ಮೂಲಕ ಈಡೇರಿರುವುದಕ್ಕೆ ಖುಷಿಯಾಗಿದೆಯಂತೆ. ಈಗಿನ ಗಳಿಕೆ ನೋಡಿದರೆ, “ಅಕಿರ’ ಚಿತ್ರಕ್ಕೆ ಯಾವುದೇ ಮೋಸ ಆಗುವುದಿಲ್ಲ ಎಂಬ ನಂಬಿಕೆ ನಿರ್ಮಾಪಕ ಚೇತನ್‌ ಅವರದು. ಇನ್ನು, ನಿರ್ದೇಶಕ ನವೀನ್‌ ಗೂ “ಅಕಿರ’ ನಿರ್ದೇಶಿಸಿದ್ದಕ್ಕೂ ಸಾರ್ಥಕವಾಗಿದೆ. ಆರಂಭದಲ್ಲಿ 45 ಚಿತ್ರಮಂದಿರಗಳಿಗೂ ಹೆಚ್ಚು ಬಿಡುಗಡೆ ಕಂಡಿದ್ದರೂ, ಅದೇ ಥಿಯೇಟರ್‌ಗಳಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ ಎಂಬ ಖುಷಿ ಅವರದು. ಮುಂದಿನ ದಿನಗಳಲ್ಲಿ ಇನ್ನೂ 25 ಚಿತ್ರಮಂದಿರಗಳು ಹೆಚ್ಚಲಿದ್ದು, ಎಲ್ಲಾ ಮಲ್ಟಿಪ್ಲೆಕ್ಸ್‌ಗಳಲ್ಲೂ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ ಎಂಬುದು ಅವರ ಮಾತು.
-ಉದಯವಾಣಿ

Comments are closed.