ಮನೋರಂಜನೆ

ಮಾದ ಮಾನಸಿಗೆ ಹಿನ್ನೆಲೆ ಸಂಗೀತ

Pinterest LinkedIn Tumblr

Maada-manasiಪ್ರಜ್ವಲ್‌ ದೇವರಾಜ್‌ ಅಭಿನಯದ “ಮಾದ ಮತ್ತು ಮಾನಸಿ’ ಚಿತ್ರಕ್ಕೆ ಹಿನ್ನೆಲೆ ಸಂಗೀತದ ಕೆಲಸ ಜೋರಾಗಿ ನಡೆಯುತ್ತಿದೆ. ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ನಿರ್ದೇಶಕರು. ನಿರ್ಮಾಣ ಕೂಡ ಅವರದೇ. “ಅಭಿನೇತ್ರಿ’ ಚಿತ್ರ ನಿರ್ದೇಶಿಸಿದ್ದ ಸತೀಶ್‌ ಪ್ರಧಾನ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ನರಸಿಂಹಮೂರ್ತಿ (ನರ್ಸಿ), ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಕೆ.ಎಸ್‌. ಚಂದ್ರಶೇಖರ್‌ ಕ್ಯಾಮೆರಾ ಹಿಡಿದರೆ, ಇಮ್ರಾನ್‌, ಕಲೈ, ಪ್ರಭು ಶ್ರೀನಿವಾಸ್‌ ಅವರ ನೃತ್ಯ ನಿರ್ದೇಶನವಿದೆ. ಡಿಫ‌ರೆಂಟ್‌ ಡ್ಯಾನಿ ಸಾಹಸ ನಿರ್ದೇಶನ ಮಾಡಿದರೆ, ಕೆ.ಎಂ.ಪ್ರಕಾಶ್‌ ಅವರು ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್‌ಗೆ ಶೃತಿ ಹರಿಹರನ್‌ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ರಂಗಾಯಣ ರಘು, ಬುಲೆಟ್‌ ಪ್ರಕಾಶ್‌, ಶೋಭರಾಜ್‌, ಪವನ್‌, ವಾಣಿಶ್ರೀ, ಶೃತಿ ನಾಯಕ್‌, ನಿರಂಜನ್‌ ಯತಿರಾಜ್‌,
ಮುಂತಾದವರಿದ್ದಾರೆ.
-ಉದಯವಾಣಿ

Comments are closed.