ಮನೋರಂಜನೆ

ಆಮ್ ಸ್ಟರ್ ಡಮ್ ಚಿತ್ರೋತ್ಸವಕ್ಕೆ ಕೇರಾಫ್ ಫ‌ುಟ್‌ಪಾತ್‌

Pinterest LinkedIn Tumblr

Care-of-Footpath-2ಕಿಶನ್‌ ನಟಿಸಿ, ನಿರ್ದೇಶಿಸಿರುವ “ಕೇರಾಫ್ ಫ‌ುಟ್‌ಪಾತ್‌-2′ ಚಿತ್ರ ಇದೀಗ ನೆದರ್‌ಲ್ಯಾಂಡ್‌ನ‌ ಆಮ್ಸ್‌ರ್ಡಮ್‌ನಲ್ಲಿ ನಡೆಯುತ್ತಿರುವ ಭಾರತೀಯ ಚಲನ ಚಿತ್ರೋತ್ಸವದಲ್ಲಿ ಅಧಿಕೃತ ಪ್ರವೇಶ ಪಡೆದು, ತೆರೆಕಾಣುತ್ತಿದೆ. ವಿಶೇಷವೆಂದರೆ, ಹಿಂದಿಯ “ಬಾಜಿರಾವ್‌ ಮಸ್ತಾನಿ’, “ಸನಮ್‌ ತೇರಿ ಕಸಮ್‌’, “ಶೋಲೆ’, “ದೇವ್‌ ದಾಸ್‌’, “ಮದರ್‌ ಇಂಡಿಯಾ’ ಚಿತ್ರಗಳೊಂದಿಗೆ ದಕ್ಷಿಣ ಭಾರತದಿಂದ ತೆರೆ ಕಾಣುತ್ತಿರುವ, ಕನ್ನಡದ ಏಕ ಚಿತ್ರವಿದು.

ಈ ಕುರಿತು ಮಾತನಾಡುವ ನಿರ್ದೇಶಕ ಕಮ್‌ ನಟ ಕಿಶನ್‌, “ನಮ್ಮ ಚಿತ್ರವನ್ನು ನೆದರ್‌ಲಾಂಡ್ಸ್‌ಗೆ ಕೊಂಡೊಯ್ಯುತ್ತಿರುವುದು ಬಹಳ ಸಂತೋಷವಾಗಿದೆ, ಇದಕ್ಕೂ ಮುನ್ನ “ಕೇರಾಫ್ ಫ‌ುಟ್‌ಪಾತ್‌’ 2006ರಲ್ಲಿ ಆಮ್ ಸ್ಟರ್ ಡಮ್ ನಲ್ಲಿ ನಡೆದ ಸಿನೆಕಿಡ್‌ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಅಧಿಕೃತ ಪ್ರವೇಶ ಪಡೆದು ತೆರೆಕಂಡಿತ್ತು. ಈಗ ಚಿತ್ರೋತ್ಸವದ ಸದಸ್ಯರು ಚಿತ್ರವನ್ನು ಡಿಸೆಂಬರ್‌ನಲ್ಲಿಯೇ ವೀಕ್ಷಿಸಿ, ಮೇ.20 ರಿಂದ 23 ರವರೆಗೆ ನಡೆಯಲಿರುವ ಚಿತ್ರೋತ್ಸವದಲ್ಲಿ ಪ್ರದರ್ಶಿಸಲು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಅದರಂತೆ, ಚಿತ್ರೋತ್ಸವದಲ್ಲಿ “ಕೇರಾಫ್ ಫ‌ುಟ್‌ಪಾತ್‌’ ಪ್ರದರ್ಶನ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಚಿತ್ರೋತ್ಸವಗಳಲ್ಲಿ ಚಿತ್ರವನ್ನು ಕೊಂಡೊಯ್ಯುವ ಉದ್ದೇಶವಿದೆ’ ಎನ್ನುವ ಕಿಶನ್‌, ಲಾಸ್‌ಏಂಜಲೀಸ್‌ನಲ್ಲಿ ಆಸ್ಕರ್‌ ನೇಮಕಾತಿಗೆ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ, ಅಂತಾರಾಷ್ಟ್ರೀಯ ವೀಕ್ಷಕರಿಂದ ಚಿತ್ರ ಮೆಚ್ಚುಗೆ ಪಡೆದದ್ದು ಮರೆಯದ ಅನುಭವ ಎನ್ನುತ್ತಾರೆ.

ಅಂದಹಾಗೆ, ನಿರ್ಮಾಪಕ ದೇವರಾಜ ಪಾಂಡೆ ಅವರು, ತೆಲುಗಿನಲ್ಲಿ ರಿಮೇಕ್‌ ಆಗಿರುವ “ಮಾಂಜ’ ಚಿತ್ರವನ್ನು ಜೂನ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.
-ಉದಯವಾಣಿ

Comments are closed.