ಕರ್ನಾಟಕ

ಖಾಸಗಿ ಶಾಲೆಗಳು ವೇಶ್ಯಾವಾಟಿಕೆ ಅಡ್ಡೆಗಿಂತಲೂ ಕಡೆ : ಸಚಿವ ಆಂಜನೇಯ

Pinterest LinkedIn Tumblr

H-Anjaneyaಬೆಂಗಳೂರು: ಸಮಾಜ ಕಲ್ಯಾಣ ಸಚಿವ ಎಚ್‌ .ಆಂಜನೇಯ ಅವರ ವಿರುದ್ದ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪ ವೊಂದು ಕೇಳಿ ಬಂದಿದ್ದು,ಇದೀಗ ಖಾಸಗಿ ಶಾಲೆಗಳು ಅವರ ವಿರುದ್ದ ಪ್ರತಿಭಟನೆ ನಡೆಸಲು ತೀರ್ಮಾನಿಸಿವೆ.

ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ವೇಳೆ ಆಂಜನೇಯ ಅವರು ‘ಖಾಸಗಿ ಶಾಲೆಗಳು ವೇಶ್ಯಾವಾಟಿಕೆ ಅಡ್ಡೆಗಿಂತಲೂ ಕಡೆ’ ಎಂದು ಹೇಳಿದ್ದರು ಎಂದು ಆರೋಪಿಸಲಾಗಿದೆ.

ಸಚಿವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ರಾಜ್ಯ ಖಾಸಗಿ ಶಾಲೆಗಳ ಒಕ್ಕೂಟ ಪ್ರತಿಭಟನೆ ನಡೆಸಲು ಮುಂದಾಗಿದೆ. ಅಲ್ಲದೆ ಜನತೆಯಲ್ಲಿ ಆಂಜನೇಯ ಕ್ಷಮೆ ಯಾಚಿಸಲು ಆಗ್ರಹಿಸಿದೆ.

ಸಮರ್ಥಿಸಿಕೊಂಡ ಆಂಜನೇಯ
ನಾನು ಕೆಲ ಶಾಲೆಗಳಿಗೆ ಅನ್ವಯಿಸಿ ಆಕ್ರೋಶದಿಂದ ಈ ಹೇಳಿಕೆ ನೀಡಿದ್ದೇನೆ ಎಂದು ಸಮರ್ಥಿಸಿಕೊಂಡರು. ಆಟಿಇ ಸೀಟು ನೀಡಲು ಕೆಲ ಖಾಸಗಿ ಶಾಲೆಗಳು ಹಿಂದೇಟು ಹಾಕುತ್ತಿವೆ. ಈ ಕುರಿತು ತುಂಬಾ ಅಸಮಧಾನ ಇದೆ. ಕೆಲ ಖಾಸಗಿ ಶಾಲೆಗಳು ಸೀಟ್‌ ಗಳಿಗಾಗಿ ಹಣ ವಸೂಲಿ ಮಾಡುತ್ತಿವೆ. ಇಂಥಹ ಶಾಲೆಗಳ ವಿರುದ್ದ ಆಕ್ರೋಶದಿಂದ ನಾನು ಹೇಳಿಕೆ ನೀಡಿದ್ದೇನೆ. ನನ್ನ ಹೇಳಿಕೆ ಎಲ್ಲಾ ಖಾಸಗಿ ಶಾಲೆಗಳಿಗೆ ಅನ್ವಯಿಸುವುದಿಲ್ಲ ಎಂದು ಟಿವಿ 9 ವಾಹಿನಿಗೆ ಹೇಳಿಕೆ ನೀಡಿದ್ದಾರೆ.

ಇದೇ ವೇಳೆ ನಾನು ತಪ್ಪು ಮಾಡಿಲ್ಲ ,ಧರಣಿಗೆ ಹೆದರುವುದಿಲ್ಲ. ನನ್ನ ವಿರುದ್ದ ದೂರು ನೀಡಿದರೂ ತೊಂದರೆಯಿಲ್ಲ ಎಂದರು.
-ಉದಯವಾಣಿ

Comments are closed.