ರಾಷ್ಟ್ರೀಯ

ಅಹಮದಾಬಾದ್ ಮೆಟ್ರೊದಲ್ಲಿ ಮಹಿಳಾ ಸಾಧಕಿ

Pinterest LinkedIn Tumblr

mahilaಅಹಮದಾಬಾದ್: ಗಾಂಧಿನಗರ- ಅಹಮದಾಬಾದ್ ಮೆಟ್ರೊಲಿಂಕ್ ಎಕ್ಸ್‌ಪ್ರೆಸ್ ಯೋಜನೆ ಸಾಕಾರಗೊಳ್ಳುವಲ್ಲಿ ಮಹಿಳಾ ಶಕ್ತಿ ಕೂಡ ಮಹತ್ವದ ಪಾತ್ರ ನಿರ್ವಹಿಸುತ್ತಿದೆ.

ಯೋಜನೆಯಲ್ಲಿ ಒಟ್ಟು ಐದು ಮಹಿಳಾ ಎಂಜಿನಿಯರ್‌ಗಳಿದ್ದು, ಕಾರ್ಯಕ್ಷೇತ್ರದಲ್ಲಿ ತೊಡಗಿಸಿಕೊಂಡು ಯೋಜನೆಯಲ್ಲಿ ಭಾಗಿಯಾಗಿರುವವರು ಮಯೂರಿಕಾ ಚಕ್ರವರ್ತಿ.ಇವರು ಸೆಪ್ಟ್ ಮತ್ತು ಬಿಟೆಕ್ ಪದವೀಧರರಾಗಿದ್ದು, ಕ್ಯಾಂಪಸ್‌ ಸೆಲೆಕ್ಷನ್‌ನಲ್ಲಿ ಆಯ್ಕೆಯಾಗಿ ಕಳೆದ ಜೂನ್‌ನಲ್ಲಿ ಮೆಟ್ರೊದಲ್ಲಿ ಎಂಜಿನಿಯರ್ ಆಗಿ ನೇಮಕಗೊಂಡವರು.

ಸೆಪ್ಟ್ ಮೊದಲ ವರ್ಷದಲ್ಲೇ ಮೆಟ್ರೊದಲ್ಲಿ ಕಾರ್ಯನಿರ್ವಹಿಸಬೇಕು ಎಂಬ ಹಂಬಲವಿತ್ತು. ಇಲ್ಲೇ ಹುಟ್ಟಿ ಬೆಳೆದ ಈ ಹೋಜನೆ ನನಗೆ ಬಹಳ ಮಹತ್ವದ್ದಾಗಿತ್ತು. ಅವಕಾಶ ಸಿಕ್ಕಿದ್ದು, ಆರಂಭದಲ್ಲಿ ವಸ್ತ್ರಾಲ್‌- ಖೊಕ್ರಾದ ಆರು ಕಿ.ಮೀ ಹಳಿ ನಿರ್ಮಾಣ ವೇಳೆ ದಿನಕ್ಕೆ ಎಂಟು ಗಂಟೆ ಪ್ರಗತಿಯ ನಿಗಾ ವಹಿಸಿದ್ದೆ,’ಎಂದು ಮಯೂರಿಕಾ ಹೇಳುತ್ತಾರೆ.

10 ವರ್ಷದ ಹಿಂದೆ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಯೋಜನೆ ಘೋಷಿಸಲಾಗಿತ್ತು. ಯೋಜನೆ ಆಮೆಗತಿಯಲ್ಲಿ ಸಾಗುತ್ತಿದೆ ಎಂಬ ಟೀಕೆಗಳು ಕೇಳಿ ಬಂದಿದ್ದು, ಮುಂದಿನ ಜೂನ್‌ನಲ್ಲಿ ಮೊದಲ ಹಂತ ಪೂರ್ಣಗೊಳ್ಳಲಿದೆ ಎಂದು ಮಯೂರಿಕಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Comments are closed.