ರಾಷ್ಟ್ರೀಯ

ಕೊಹ್ಲಿಗೆ ಖೇಲ್‌ ರತ್ನ, ರಹಾನೆಗೆ ಅರ್ಜುನ ಪ್ರಶಸ್ತಿಗೆ ಶಿಫಾರಸು

Pinterest LinkedIn Tumblr

rahhhhhhhನವದೆಹಲಿ (ಪಿಟಿಐ): ಅತ್ಯುನ್ನತ ರಾಜೀವ್ ಗಾಂಧಿ ಖೇಲ್ ರತ್ನ ಕ್ರೀಡಾ ಪ್ರಶಸ್ತಿಗೆ ಭಾರತ ಕ್ರಿಕೆಟ್‌ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಹಾಗೂ ಅರ್ಜುನ ಪ್ರಶಸ್ತಿಗೆ ಅಜಿಂಕ್ಯಾ ರಹಾನೆ ಅವರ ಹೆಸರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಶಿಫಾರಸು ಮಾಡಿದೆ.

ಅಂತರರಾಷ್ಟ್ರೀಯ ಮತ್ತು ಐಪಿಎಲ್‌ ಪಂದ್ಯಗಳಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಕೊಹ್ಲಿ ಅವರ ಹೆಸರನ್ನು ಬಿಸಿಸಿಐ ಶಿಫಾರಸು ಮಾಡಿ ಸರ್ಕಾರಕ್ಕೆ ಕಳುಹಿಸಿದೆ. ಮಧ್ಯಮ ಕ್ರಮಾಂಕದ ಆಟಗಾರ ರಹಾನೆ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಖೇಲ್‌ ರತ್ನ ಪ್ರಶಸ್ತಿಗೆ 7.5 ಲಕ್ಷ, ಅರ್ಜುನ ಪ್ರಶಸ್ತಿಗೆ 5 ಲಕ್ಷ ರೂಪಾಯಿ ನಗದು ಮತ್ತು ಪ್ರಶಸ್ತಿ ಪದಕವನ್ನು ನೀಡಲಾಗುವುದು.

Write A Comment