ರಾಷ್ಟ್ರೀಯ

ಕೇಜ್ರಿವಾಲ್‌ ಸಿನಿಮಾ ನಟಿನಾ..?: ಲಾಲು ಪ್ರಸಾದ್‌ ಯಾದವ್‌

Pinterest LinkedIn Tumblr

aravindಪಟ್ನಾ (ಏಜೆನ್ಸಿಸ್‌): ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಬಲವಂತವಾಗಿ ಅಪ್ಪಿಕೊಳ್ಳಲು ಅವರೇನೂ ಸಿನಿಮಾ ನಟಿಯಾ! ಎಂದು ಪ್ರಶ್ನಿಸುವ ಮೂಲಕ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್‌ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಅವರನ್ನು ಬಂಧಿಸುವಂತೆ ಸವಾಲು ಹಾಕಿರುವುದು ಸರಿಯಲ್ಲ ಎಂದರು. ಅರವಿಂದ್‌ ಕೇಜ್ರಿವಾಲ್‌ ಅವರು ಹದ್ದು ಮೀರಿ ವರ್ತಿಸುತ್ತಿದ್ದಾರೆ ಎಂದು ಲಾಲೂ ಹೇಳಿದರು.

ನಿತಿಶ್‌ ಕುಮಾರ್‌ ಅವರ ಪ್ರಮಾಣ ವಚನ ಸಮಾರಂಭ ಕಾರ್ಯಕ್ರಮದಲ್ಲಿ ಲಾಲು ಪ್ರಸಾದ್‌ ಯಾದವ್‌ ಅವರು ನನ್ನನ್ನು ಬಲವಂತವಾಗಿ ಅಪ್ಪಿಕೊಂಡಿದ್ದರು ಎಂಬ ಹೇಳಿಕೆ ನೀಡಿರುವ ಬಗ್ಗೆ ಮಾಧ್ಯಮ ಪ್ರತಿನಿದಿಗಳು ಪ್ರಶ್ನೆ ಮಾಡಿದಾಗ, ಕೇಜ್ರಿವಾಲ್‌ ಅವರನ್ನು ಬಲವಂತವಾಗಿ ತಬ್ಬಿಕೊಳ್ಳಲು ಅವರೇನೂ ಸಿನಿಮಾ ನಟಿನಾ ಎಂದು ಹಾಸ್ಯ ಚಟಾಕಿ ಹಾರಿಸಿದರು.

Write A Comment