ಕರ್ನಾಟಕ

ವಿಜಯ್‌ ಮಲ್ಯ ಪರ ವಹಿಸಿದ ದೇವೇಗೌಡ

Pinterest LinkedIn Tumblr

deve

ಬೆಂಗಳೂರು: ‘ಉದ್ಯಮದಲ್ಲಿ ಏರಿಳಿತ ಸಹಜ. ಉದ್ಯಮಿ ವಿಜಯ್ ಮಲ್ಯ ಬಳಿ ಸಾಲ ತೀರಿಸಲು ಬೇಕಾಗುವಷ್ಟು ಆಸ್ತಿ ಇದೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಲ್ಯ ಕರ್ನಾಟಕದ ಮಣ್ಣಿನ ಮಗ. ಇಂದು ಹಲವಾರು ವಿಮಾನಯಾನ ಕಂಪೆನಿಗಳು ನಷ್ಟ ಅನುಭವಿಸುತ್ತಿವೆ. ಜಾಗತಿಕ ಮಟ್ಟದಲ್ಲಿ ಉದ್ಯಮ ಹೊಂದಿರುವ ಮಲ್ಯರೊಬ್ಬರನ್ನೇ ಗುರಿಯಾಗಿಸಿಕೊಂಡು ಮಾತನಾಡಬೇಕಿಲ್ಲ’ ಎಂದರು.

ಮಲ್ಯ ಅವರು ಒಮ್ಮೆ ಕಾಂಗ್ರೆಸ್–ಜೆಡಿಎಸ್ ಬೆಂಬಲದಿಂದ, ಇನ್ನೊಮ್ಮೆ ಬಿಜೆಪಿ–ಜೆಡಿಎಸ್‌ ಬೆಂಬಲದಿಂದ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಅವರಿಗೆ ಬೆಂಬಲ ನೀಡಿದ ತಮ್ಮ ಪಕ್ಷದ ಕ್ರಮವನ್ನು ಸಮರ್ಥಿಸಿಕೊಂಡ ದೇವೇಗೌಡ, ‘ಮಲ್ಯ ಹುಟ್ಟಿದ್ದು ಕರ್ನಾಟದಲ್ಲಿ; ಲಂಡನ್‌ನಲ್ಲಿ ಅಲ್ಲ’ ಎಂದರು. ವಿಠಲ ಮಲ್ಯ (ವಿಜಯ್ ಮಲ್ಯ ತಂದೆ) ದೊಡ್ಡ ಉದ್ಯಮಿಯಾಗಿದ್ದರು. ಅವರಿಗೆ ಕಾಂಗ್ರೆಸ್ ಮುಖಂಡರ ಜತೆ ಒಡನಾಟ ಇತ್ತೆಂದು ನೆನಪಿಸಿದರು.

Write A Comment