ಅಂತರಾಷ್ಟ್ರೀಯ

ವಿಶ್ವ ಮಹಿಳಾ ದಿನದಂದು ಹೂ ನೀಡದ್ದಕ್ಕೆ ಪತಿಯ ವೃಷಣ ಕಿತ್ತ ಪತ್ನಿ

Pinterest LinkedIn Tumblr

flower

ರೊಮಾನಿಯಾ: ಅಂತಾರಾಷ್ಟ್ರೀಯ ಮಹಿಳಾ ದಿನದಂದು ರೊಮಾನಿಯಾದ ಮಹಿಳೆಯೊಬ್ಬಳು ಹೂಗಳನ್ನು ನೀಡಿ ಶುಭಾಶಯ ಹೇಳದ್ದಕ್ಕೆ ಪತಿಯ ವೃಷಣವನ್ನು ಕೈಯಿಂದ ಎಳೆದು ಕಿತ್ತಿದ್ದಾಳೆ.

ದೇಶದ ಈಶಾನ್ಯ ಭಾಗದಲ್ಲಿ ದಂಪತಿ ನೆಲೆಸಿದ್ದು ಪತ್ನಿ 40 ಮರಿನೆಲ 39 ವರ್ಷದ ಲೋನಲ್ ಮೇಲೆ ಹಲ್ಲೆ ನಡೆಸಿದ್ದಾಳೆ. ಪತಿಯ ಜೊತೆ ಜಗಳ ಮಾಡಿದ ಮರಿನೆಲ ನಂತರ ಸಿಟ್ಟಾಗಿ ವೃಷಣಗಳನ್ನು ಎಳೆದಾಗ ಎಡ ಭಾಗದ ವೃಷಣ ಹರಿದು ಹೋಗಿ ತುಂಡಾಗಿದೆ. ಕೂಡಲೇ ಆಸ್ಪತ್ರೆಗೆ ಪತಿ ದಾಖಲಾಗಿದ್ದು ವೈದ್ಯರು ತುರ್ತುಚಿಕಿತ್ಸೆ ನೀಡಿದ್ದರಿಂದ ಈಗ ಆರೋಗ್ಯವಾಗಿದ್ದಾನೆ.

ಯಾಕೆ ಈ ರೀತಿ ಗಂಭೀರ ಹಲ್ಲೆ ನಡೆಸಿದ್ದು ಎಂದು ಕೇಳಿದ್ದಕ್ಕೆ ಮರಿನೆಲ, ಪತಿ ಮದ್ಯಪಾನ ಮಾಡಿ ಮನೆಗ ಬಂದಿದ್ದ, ರಾತ್ರಿಯಿಡಿ ಚಳಿ ಇದೆ ಎಂದು ಹೇಳಿ ಬೆಂಕಿ ಉರಿಸಲು ಹೇಳಿದ್ದ. ಆತನ ಆಜ್ಞೆಯನ್ನು ನಾನು ಪಾಲಿಸಿದ್ದೆ. ಬೆಳಗ್ಗೆ ಎದ್ದು ಕೆಲಸ ಹೋಗು ಎಂದು ನಾನು ಹೇಳಿದ್ದಕ್ಕೆ ಆದರೆ ಆದಕ್ಕೆ ಆತ ಹೋಗುವುದಿಲ್ಲ ಎಂದು ಹೇಳಿದ್ದಕ್ಕೆ ಸಿಟ್ಟಾಗಿ ಜಗಳ ಮಾಡಿ ಎಳೆದಾಗ ಇಲ್ಲಿಯವರೆಗೆ ತಲುಪಿದೆ ಎಂದು ಹೇಳಿದ್ದಾಳೆ.

ಮನೆಗೆಲಸ ಮಾಡದ್ದಕ್ಕೆ ಮತ್ತು ವಿಶ್ವ ಮಹಿಳಾ ದಿನದಂದು ಹೂ ನೀಡಿ ಶುಭಾಶಯ ಹೇಳದ್ದಕ್ಕೆ ಪತ್ನಿ ಈ ರೀತಿ ಮಾಡಿದ್ದಾಳೆ ಎಂದು ಪತಿ ದೂರಿದ್ದರಿಂದ ಪೊಲೀಸರು ಈಗ ಯಾರು ಸರಿ ಹೇಳುತ್ತಿದ್ದಾರೆ ಎನ್ನುವುದನ್ನು ತಿಳಿಯಲು ತನಿಖೆ ಆರಂಭಿಸಿದ್ದಾರೆ.

Write A Comment