ಕರ್ನಾಟಕ

ಹೊಸ ಪ್ರತಿಭೆಗಳಿಗೆ ನೆಲೆ ಕಲ್ಪಿಸಿದ ಪ್ರತಿಭಾವಂತ ಚಂದನವನದ ದೇಸಿ ಪ್ರತಿಭೆ ಅರ್ಜುನ

Pinterest LinkedIn Tumblr

arjuna

ಕನ್ನಡ ಚಿತ್ರರಂಗಕ್ಕೆ “ಅಂಬಾರಿ”ಯ ಮೂಲಕ “ಅದ್ದೂರಿ”ಯಾಗಿ ಪ್ರವೇಶ ಪಡೆದು “ರಾಟೆ” ತಿರುಗಿಸುತ್ತಲೇ “ಐರಾವತ” ಏರಿ ರಾಜಗಾಂಭಿರ್ಯದಲ್ಲಿ ಚಂದನವನದಲ್ಲಿ ಹೆಜ್ಜೆ ಹಾಕಿದ “ಅರ್ಜುನ’. ಕೇವಲ ನಟರಷ್ಟೇ ಸ್ಟಾರ್ ಅಲ್ಲ, ನಿರ್ದೇಶಕರೂ”ಸ್ಟಾರ್”ಎನ್ನುವುದನ್ನು ತೋರಿಸಕೊಟ್ಟ ಅಪ್ಪಟ ದೇಸಿ ಪ್ರತಿಭೆ.

ಒಂದರ ಮೇಲೊಂದರಂತೆ ಯಶಸ್ವಿ ಚಿತ್ರಗಳನ್ನು ನೀಡಿ ಆ ಮೂಲಕ ಹೊಸ ಪ್ರತಿಭೆಗಳಿಗೆ ಚಿತ್ರರಂಗದಲ್ಲಿ ಭದ್ರವಾದ ನೆಲೆ ಕಲ್ಪಿಸಿದ ಪ್ರತಿಭಾವಂತ ನಿರ್ದೇಶಕ ಎ.ಪಿ ಅರ್ಜುನ್.

ನಿರ್ದೇಶಕರಾಗುವ ಮುನ್ನ ರವಿಚಂದ್ರನ್ ಅವರ ಈಶ್ವರಿ ಸಂಸ್ಥೆಯಲ್ಲಿ ಕೆಲ ದಿನಗಳ ಕಾಲ ಕೆಲಸ ಮಾಡಿದ ಅರ್ಜುನ್ ಆ ಬಳಿಕ ಪಿ.ಎನ್ ಸತ್ಯ ಅವರ ಬಳಿ, “ಶಾಸ್ತ್ರಿ”,”ಗಿಗಾಗಿ” “ಸ್ನೇಹನಾ ಪ್ರೀತಿನಾ “ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಈ ನಡುವೆ ಚಿತ್ರದಲ್ಲಿ ನಾಲ್ಕು ಹಾಡುಗಳನ್ನು ಬರೆಯುವ ಅವಕಾಶ ಪಡೆದ ಅರ್ಜುನ್,ಗೀತರಚನೆಯನ್ನು ಜೊತೆ ಜೊತೆಯಲ್ಲಿಯೇ ಮುಂದುವರಿಸಿದರು.

ಇದರ ಮಧ್ಯೆ “ಅಂಬಾರಿ” ಚಿತ್ರದ ಕಥೆ ಸಿದ್ದ ಮಾಡಿಕೊಂಡು ನಿರ್ಮಾಪಕರಿಗಾಗಿ ಅಲೆದಾಡುವ ಸಂದರ್ಭದಲ್ಲಿ ಸಿದ್ದರಾಜು ಹಾಗು ರಂಗನಾಥನಾಯ್ಡು ಚಿತ್ರಕ್ಕೆ ಬಂಡವಾಳ ಹಾಕಿದರು. ಚಿತ್ರೀಕರಣ ಮುಗಿದು ೧೫೦ ದಿನ ಯಶಸ್ವಿ ಪ್ರದರ್ಶನ ಕಂಡಿತು. ಆದಾದ ಬಳಿಕ ಸರಿ ಸುಮಾರು ಒಂದೂಮುಕ್ಕಾಲು ವರ್ಷ ಯಾವುದೇ ಕೆಲಸವಿಲ್ಲದೆ ಮತ್ತೆ ಅಲೆದಾಡುವಂತಾಯಿತು.

ಆಗ ಅಭಿನಯತರಂಗದಲ್ಲಿ ಕಂಡ ಹುಡುಗನನ್ನು ನೀನೆ ನನ್ನ ಚಿತ್ರಕ್ಕೆ ಹೀರೋ ಎಂದು ಹೇಳಿ ಆತನ ದೇಹತೂಕವನ್ನು ೨೦ ಕೆ.ಜಿ ಕಡಿಮೆ ಮಾಡಿಸಿ ನಿರ್ಮಾಪಕರ ಬಳಿ ಅಲೆದಾಟ. ಹತ್ತಾರು ಮಂದಿ ಕಥೆ ಕೇಳಿ ದೃವಸರ್ಜಾ ಹೊಸಬ ಎಂದರು. ಇನ್ನೂ ನಾಲ್ಕೈದು ಮಂದಿ ಮಹೂರ್ತ ಮಾಡಿ ಚಿತ್ರವನ್ನು ಅರ್ಧಕ್ಕೆ ಕೈಬಿಟ್ಟರು.

ಆಗ ಸಹಾಯಕ್ಕೆ ವಿತರಕ ಜಯಣ್ಣ ಮತ್ತು ಭಾಷಾ ನೆರವಿಗೆ ಬಂದರು.ಚಿತ್ರ ಮುಗಿದು ೨೫ ವಾರ ಓಡಿತು ಎಂದು ಹಳೆಯದನ್ನು ಮೆಲುಕು ಹಾಕಿದರು ನಿರ್ದೇಶಕ ಎ.ಪಿ ಅರ್ಜುನ್.

ಮತ್ತೆ ಸಂಗೀತ ನಿರ್ದೇಶಕ ಹರಿಕೃಷ್ಣ ಜತೆಗೂಡಿ “ರಾಟೆ” ಚಿತ್ರವನ್ನು ನಿರ್ಮಾಣ ಮಾಡಿದರು. ಈ ಚಿತ್ರಕ್ಕೆ ಮತ್ತೆ ಹೊಸಬರನ್ನು ಆಯ್ಕೆ ಮಾಡಿಕೊಂಡು ಅವರಿಗೊಂದು ನೆಲೆ ಕಲ್ಪಿಸಲು ಮುಂದಾದರು. ಚಿತ್ರೀಕರಣದ ಸಮಯದಲ್ಲಿ ಆದ ಕೆಲ ತೊಂದರೆಗಳಿಂದ ಚಿತ್ರ ವಿಳಂಬವಾಯಿತು ಮತ್ತೆ ಹಾಗೂ ಹೀಗೂ ಚಿತ್ರೀಕರಣ ಮುಗಿಸಿ ಬಿಡುಗಡೆ ಮಾಡಿದೆವು.

ಇದರ ಮಧ್ಯೆ ದರ್ಶನ್ ಅವರಿಗಾಗಿ ಐರಾವತ ಚಿತ್ರದ ಕತೆ ಸಿದ್ದಪಡಿಸಿದವು. ಸ್ಟಾರ್ ನಟರು ಹೆಚ್ಚಾಗಿ ಇದ್ದುದರಿಂದ ಎಲ್ಲರ ಸಯಮ ಹೊಂದಿಸಿ ಚಿತ್ರ ಮಾಡುವುದು ತುಸು ತಡ ಆಯಿತು ಅದನ್ನು ಹೊರತು ಪಡಿಸಿ ಚಿತ್ರ ಹಣಗಳಿಕೆಯಲ್ಲಿ ಹಿಂದೆ ಬೀಳಲಿಲ್ಲ ಹಾಕಿದ ಬಂಡವಾಳಕ್ಕಿಂತ ಹೆಚ್ಚಿನ ಹಣ ಬಂತು ಎಂದರು.

ಹೊಸಬರ ಚಿತ್ರಗಳೆ ಹೆಚ್ಚು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಮತ್ತೆ “ಕಿಸ್” ಚಿತ್ರ ಕೈಗೆತ್ತಿಕೊಳ್ಳಳಾಗಿದೆ.ನಾಯಕ ನಾಯಕಿಯರ ಆಯ್ಕೆ ನಡೆಯುತ್ತಿದೆ. ಇನ್ನೊಂದು ವಾರದಲ್ಲಿ ಅಂತಿಮವಾಗಲಿದೆ. ಆ ನಂತರ ಏಪ್ರಿಲ್ ಕೊನೆ ಇಲ್ಲವೆ ಮೇ ತಿಂಗಳ ಮೊದಲವಾರ ಚಿತ್ರೀಕರಣ ಆರಂಬಿಸುತ್ತೇವೆ ಒಳ್ಳೆಯ ಚಿತ್ರ ನೀಡುವ ಉದ್ದೇಶ ನಮ್ಮದು ಇದಕ್ಕಾಗಿ ಪ್ರಯತ್ನ ಮಾಡುತ್ತಿದ್ದೇವೆ. ಈ ಚಿತ್ರದಲ್ಲಿ ಸ್ಟಾರ್ ಕಲಾವಿದರಿಲ್ಲ ಆದರೆ ಸ್ಟಾರ್ ತಂತ್ರಜ್ಞರಿದ್ದಾರೆ ಎಂದು ವಿವರ ನೀಡಿದರು ಅರ್ಜುನ್.

Write A Comment