ಮುಂಬೈ: ಬೆಚ್ಚಿ ಬೀಳಿಸುವ ಪ್ರಕರಣ ಇದು. ಈ ವಿಡಿಯೋ ತುಣುಕನ್ನು ನೋಡಿದಾಗ, ಹೆತ್ತ ತಾಯಿಯನ್ನು ಈ ಪರಿಯಾಗಿ ಶಿಕ್ಷಿಸುವ ಮಕ್ಕಳೂ ಇದ್ದಾರೆಯೇ ಅನಿಸುವುದರಲ್ಲಿ ಅನುಮಾನವೇ ಇಲ್ಲ.
ಹೌದು, ಮಹಾರಾಷ್ಟ್ರದ ಬುಲ್ಡಾಣ ಎನ್ನುವಲ್ಲಿ ವ್ಯಕ್ತಿಯೊಬ್ಬ 101 ವರ್ಷ ವಯಸ್ಸಿನ ತನ್ನ ತಾಯಿಯನ್ನು ಚೈನ್ನಲ್ಲಿ ಕಟ್ಟಿಹಾಕಿ ನರಕಯಾತನೆ ಅನುಭವಿಸುವಂತೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸ್ಥಳೀಯರ ಮಾಹಿತಿಯಂತೆ ಮಗರಾಯ ಕಳೆದ ಏಳೆಂಟು ವರ್ಷಗಳಿಂದ ತಾಯಿಯ ಕಾಲನ್ನು ಚೈನ್ನಿಂದ ಕಟ್ಟಿಹಾಕಿರುತ್ತಿದ್ದ ಎನ್ನಲಾಗಿದೆ. ಮನಕಲಕುವ ಈ ಮಾಹಿತಿಯನ್ನು ಕಲೆಹಾಕಿದ ಪೊಲೀಸರು ದಾಳಿ ನಡೆಸಿ ಮಗರಾಯನನ್ನು ಬಂಧಿಸಿದಾಗಲೇ ಸಾರ್ವಜನಿಕರಿಗೆ ಆತ ಕ್ರೂರತನ ಬಯಲಾಗಿದೆ.
ತಾಯಿಯನ್ನು ಬಂಧಮುಕ್ತಗೊಳಿಸಿದ ಪೊಲೀಸರು ಈ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.