ಕರ್ನಾಟಕ

ಮೇರಾ ಭಾರತ್ ಮಹಾನ್; ಸೇನೆಗೆ ಸೇರಲು ರಾಜ್ಯದಲ್ಲಿ ಯುವಕರ ದಂಡು…

Pinterest LinkedIn Tumblr

Salute_Indian_Army_troopsಮೈಸೂರು:ಹೌದು ದೇಶದ ರಕ್ಷಣೆಗಾಗಿ, ಭಾರತ ಮಾತೆಯ ಸೇವೆ ಮಾಡಲು ಯುವ ಪಡೆ ಮುಂದಾಗಿದ್ದಾರೆ. ಇವರಿಗೆ ಸಿಯಾಚಿನ್ ಹುತಾತ್ಮ ಯೋಧರೇ ಪ್ರೇರಣೆಯಂತೆ. ಮೈಸೂರಲ್ಲಿ ನಡೆಯುತ್ತಿರುವ ವಾಯುಸೇನೆ ನೇಮಕಾತಿಗಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಮಂದಿ ಭಾಗವಹಿಸಿದ್ದಾರೆ.

ವಾಯುಸೇನೆಗಾಗಿ ಮೈಸೂರಲ್ಲಿ ನೇಮಕಾತಿ ನಡೆಯುತ್ತಿದೆ. ಅದಕ್ಕಾಗಿ ರಾಜ್ಯದ ವಿವಿಧೆಡೆಯಿಂದ ಸುಮಾರು 3 ಸಾವಿರ ಮಂದಿ ಆಗಮಿಸಿದ್ದಾರೆ. ಇವರಿಗೆಲ್ಲಾ ಇತ್ತೀಚೆಗೆ ಸಿಯಾಚಿನ್ ನಲ್ಲಿ ಹುತಾತ್ಮರಾದ ವೀರ ಯೋಧರೇ ಸ್ಫೂರ್ತಿಯಂತೆ. ಭಾರತ ಮಾತೆ ಸೇವೆ ಮಾಡಲು ಮುಂದಾಗಿರುವ ಯುವಪಡೆಗೆ ಸಲಾಂ….ಮೇರಾ ಭಾರತ್ ಮಹಾನ್….

ಇತ್ತೀಚೆಗೆ ವಿಶ್ವದ ಅತೀ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ನಲ್ಲಿ ಸಂಭವಿಸಿದ ಭೀಕರ ಹಿಮಕುಸಿತದಲ್ಲಿ ರಾಜ್ಯದ ಧಾರವಾಡದ ಬೆಟಗೇರಿಯ ಹನುಮಂತಪ್ಪ ಕೊಪ್ಪದ್, ಪಿಎನ್ ಮಹೇಶ್, ಟಿಟಿ ನಾಗೇಶ್ ಸೇರಿದಂತೆ ಹತ್ತು ಮಂದಿ ಯೋಧರು ಹುತಾತ್ಮರಾಗಿದ್ದರು. ಇವರಲ್ಲಿ ಕೊಪ್ಪದ್ ಸುಮಾರು ಆರು ದಿನಗಳ ಕಾಲ ಹಿಮದೊಳಕ್ಕೆ ಸಿಲುಕಿದ್ದರು ಪವಾಡ ಎಂಬಂತೆ ಬದುಕಿದ್ದರು. ಆದರೆ ದೆಹಲಿಯ ಆರ್ ಆರ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ವಿಧಿವಶರಾಗಿದ್ದರು.

-ಉದಯವಾಣಿ

Write A Comment