ಚಿಕ್ಕಬಳ್ಳಾಪುರ, ಫೆ.18-ಶಾಶ್ವತ ನೀರಾವರಿ ಹೋರಾಟ ಪ್ರಾರಂಭಿಸಿ 150 ದಿನಗಳು ಕಳೆದ ಹಿನ್ನೆಲೆಯಲ್ಲಿ ಬಹಿರಂಗ ಚರ್ಚೆಗೆ ಕರೆದಿದ್ದ ಬಯಲು ಸೀಮೆ ಶಾಸಕರ ಪೈಕಿ 3 ಜನ ಶಾಸಕರು ಮಾತ್ರ ಹಾಜರಾಗಿ ಉಳಿದ ಎಲ್ಲ ಶಾಸಕರು ಒಂದಿಲ್ಲೊಂದು ಸಬೂಬು ಹೇಳಿ ಜಾರಿಕೊಂಡ ಪ್ರಸಂಗ ನಡೆದಿದೆ.
ಶಾಸಕರಿಗೆ ನೀರಾವರಿ ಯೋಜನೆಗಳ ಸಮಗ್ರ ಮಾಹಿತಿ ನಿಡಲು ಕರೆದಿದ್ದ ಈ ಸಬೆಗೆ ಶಿಡ್ಲಘಟ್ಟ ಶಾಸಕ ಎಂ.ರಾಜಣ್ಣ ಚಿಂತಾಮಣಿ ಶಾಸಕ ಜೆ.ಕೆ ಕ್ರಿಷ್ಣಾರೆಡ್ಡಿ ಮತ್ತು ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಮಾತ್ರ ಹಾಜರಾಗಿದ್ದರು.
ಮುಂದಿನ ಅವೇಶನ ನಡೆಯುವ ಒಳಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಬಯಲು ಸೀಮೆ ನೀರಾವರಿ ಯೋಜನೆ ಪ್ರಗತಿ ಮತ್ತು ಎತ್ತಿನಹೊಳೆ ಹಾಗು ಇತರೆ ಸಾಧ್ಯತೆಗಳ ಬಗ್ಗೆ ಹೋರಾಟಗಾರರು ಮತ್ತು ಈ ಬಾಗದ ಜನಪ್ರತಿನಿದಿಗಳ ಸಭೈ ಕರೆದು ಚರ್ಚಿಸದಿದ್ದಲ್ಲಿ ಸಮಿತಿ ತೀರ್ಮಾನದಂತೆ ಬೆಂಗಳೂರಿಗೆ ರೈತರ ಬೃಹತ್ ಟ್ಯಾಕ್ಟರ್ ರ‍್ಯಾಲಿ ಮಾಡಿ ಬೆಂಗಳೂರಿನ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ. ಇದಕ್ಕೆ ನಿಮ್ಮ ಬೆಂಬಲವಿದೆಯೇ ಎಂದು ಈ ಮೂವರು ಶಾಸಕರನ್ನು ಪ್ರಶ್ನಿಸಲಾಯಿತು.
ನಿಮ್ಮ ಹೋರಾಟಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದು ಜೆಡಿಎಸ್ ಶಾಸಕರಾದ ರಾಜಣ್ಣ ಮತ್ತು ಕೃಷ್ಣಾರೆಡ್ಡಿ ಹೇಳಿದರೆ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಮಾತ್ರ ಮುಖ್ಯಮಂತ್ರಿ ಬಳಿ ಮಾತನಾಡಲು ನನಗೊಂದು ಅವಕಾಶಕೊಡಿ. 2-3 ದಿನದಲ್ಲಿ ಸಭೆ ಕರೆದು ಚರ್ಚಿಸಲು ಸಮಯ ಕೇಳುತ್ತೇನೆ ಅದೇನಾದರೂ ವಿಪಲವಾದರೆ ನಾನೂ ನಿಮ್ಮೊಟ್ಟಿಗೆ ಹೋರಾಟಕ್ಕೆ ದುಮುಕುತ್ತೇನೆ ಎಂದು ಹೋರಾಟಗಾರರಲ್ಲಿ ಮನವಿ ಮಾಡಿದ್ದಾರೆ.