ಬೆಂಗಳೂರು: ರಿಲಯನ್ಸ್ ಕಮ್ಯುನಿಕೇಷನ್, ಉಬರ್ ಸಂಸ್ಥೆಗಳ ಯೋಜನೆಗಳಿಗೆ ರಾಜ್ಯ ಸರ್ಕಾರದ ಉನ್ನತ ಮಟ್ಟದ ಸಮಿತಿ ಹಸಿರುನಿಶಾನೆ ತೋರಿದೆ. ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಉಬರ್ ಸಂಸ್ಥೆ ಅಂದಾಜು 200 ನೇರ ಹಾಗೂ 1 ಲಕ್ಷ ಚಾಲಕರಿಗೆ ಪರೋಕ್ಷ ಉದ್ಯೋಗ ನೀಡಲಿದೆ. ಉಬರ್ ಅಪ್ಲಿಕೇಷನ್ ಮೂಲಕ ಪ್ರಯಾಣಿಕರಿಗೆ ಕಾರು ಸೌಲಭ್ಯ ಒದಗಿಸುವುದು ಯೋಜನೆ ಉದ್ದೇಶವಾಗಿದೆ. ಸಂಸ್ಥೆಯು 99 ಕೋಟಿ ರೂ. ಬಂಡವಾಳ ಹೂಡುತ್ತಿದೆ. ವೈಟ್ಫೀಲ್ಡ್
ನಲ್ಲಿರುವ ಕೈಗಾರಿಕೋದ್ದೇಶ ಭೂಮಿಯನ್ನು ಮಾಹಿತಿ ತಂತ್ರಜ್ಞಾನ ಉದ್ಯಮಕ್ಕೆ ಉದ್ದೇಶಕ್ಕೆ ಬಳಿಸಿಕೊಳ್ಳಲು ರಿಲಯನ್ಸ್ ಕಮ್ಯುನಿಕೇಷನ್ಗೆ ಸರ್ಕಾರ ಅನುಮತಿ ನೀಡಿದೆ. ಕೊಡಾಕ್ ಸಂಸ್ಥೆಯಿಂದ ಭೂಮಿ ಖರೀದಿಸಿ ಕೈಗಾರಿಕೆ ಭೂಮಿಯಿಂದ ಐಟಿ ಉದ್ಯಮದ ಭೂಮಿಯಾಗಿ ಪರಿವರ್ತಿಸಿಕೊಡುವಂತೆ ರಿಲಯನ್ಸ್ ಮನವಿ ಸಲ್ಲಿಸಿತ್ತು. ಈ ಜಾಗದಲ್ಲಿ ಸಂಸ್ಥೆಯು ಐಟಿ ಕಮ್ಯುನಿಕೇಷನ್ಗೆ ಸಂಬಂಧಿಸಿದ ಡಾಟಾ ಕೇಂದ್ರ ಆರಂಭಿಸಲಿದೆ.