ಕರ್ನಾಟಕ

ಸಿಎಂ ಸಿದ್ದರಾಮಯ್ಯರಿಂದ ಅಧಿಕಾರಿಗೆ ಕಪಾಳಮೋಕ್ಷ

Pinterest LinkedIn Tumblr

siddu-cmಬಳ್ಳಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ಶನಿವಾರ ಬಳ್ಳಾರಿಯಲ್ಲಿ ನಡೆದಿದೆ.

ಇಂದು ನಗರದ ಕೌಲ್ ಬಜಾರ್ ಪ್ರದೇಶದಲ್ಲಿ ನಿರ್ಮಾಣವಾಗಿದ್ದ ವಾಲ್ಮೀಕಿ ಕಟ್ಟಡ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಡ್ಡಬಂದ ಬಳ್ಳಾರಿ ನಗರ ಪಾಲಿಕೆ ಆಯುಕ್ತ ರಮೇಶ್ ಅವರಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ.

ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ರಮೇಶ್ ಅವರು, ಸಿಎಂ ನನಗೆ ಏಕೆ ಕಪಾಳಮೋಕ್ಷ ಮಾಡುತ್ತಾರೆ, ಇದಕ್ಕೆ ಸುಳ್ಳು ಸುದ್ದಿ. ಅವರಿಗೆ ನನಗೆ ಕಪಾಳಮೋಕ್ಷ ಮಾಡಿಲ್ಲ. ನಾನು ಅವರಿಗೆ ಹೂಗುಚ್ಚ ನೀಡಲು ಹೋದಾಗ ಕಾಲು ಜಾರಿತು. ಹೀಗಾಗಿ ಅವರು ತಮ್ಮ ಭದ್ರತಾ ಸಿಬ್ಬಂದಿಗೆ ನನ್ನ ತಳ್ಳಬೇಡಿ ಎಂದರು ಅಷ್ಟೇ ಎಂದಿದ್ದಾರೆ.

Write A Comment