ಕರ್ನಾಟಕ

ಪ್ರೇಮಕುಮಾರಿ ವಿರುದ್ಧ ಸಿಐಡಿ ಚಾರ್ಜ್​ಶೀಟ್

Pinterest LinkedIn Tumblr

preಮೈಸೂರು: ಮಾಜಿ ಸಚಿವ ಎಸ್.ಎ. ರಾಮದಾಸ್ ಮದುವೆ ಆಗುವುದಾಗಿ ವಂಚಿಸಿದ್ದಾರೆ ಎಂದು ಆರೋಪಿಸಿದ್ದ ಪ್ರೇಮಕುಮಾರಿಯೇ ‘ಬ್ಲಾಕ್​ವೆುೕಲ್’ ಮಾಡಿದ್ದಾರೆ ಎಂದು ಆರೋಪಿಸಿ ಸಿಐಡಿ ಪೊಲೀಸರು ಕೋರ್ಟ್​ಗೆ ಚಾರ್ಜ್​ಶೀಟ್ ಹಾಕಿದ್ದಾರೆ.

ಆರೋಪ ಮಾಡಿದ ಬಳಿಕ ಪ್ರೇಮಕುಮಾರಿ, ರಾಮದಾಸ್ ಸಹೋದರನೊಂದಿಗೆ ಮಾತುಕತೆ ನಡೆಸಿ 1.10 ಕೋಟಿ ರೂ. ಪಡೆದಿದ್ದಾರೆ. ಈ ಹಣದಿಂದ ಕನಕದಾಸ ನಗರದಲ್ಲಿ ಒಂದು ನಿವೇಶನ ಹಾಗೂ ಒಂದು ಕಾರು ಖರೀದಿಸಿದ್ದಾರೆ ಎಂದು ಚಾರ್ಜ್ ಶೀಟ್​ನಲ್ಲಿ ಹೇಳಲಾಗಿದೆ. ಪ್ರೇಮಕುಮಾರಿ, ಆಕೆಯ ತಾಯಿ ಹಾಗೂ ಸಹೋದರ ತಮ್ಮನ್ನು ಬ್ಲಾಕ್​ವೆುೕಲ್ ಮಾಡಿ ಹಣ ಪಡೆದಿದ್ದಾರೆಂದು ಆರೋಪಿಸಿ ರಾಮದಾಸ್ ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಸಾಂರ್ದಭಿಕ ಸಾಕ್ಷ್ಯ ಕಲೆ ಹಾಕಿದ ಸಿಐಡಿ ಪೊಲೀಸರು, ಪ್ರೇಮಕುಮಾರಿ ಅವರಿಂದ ನಿವೇಶನ ಹಾಗೂ ಕಾರನ್ನು ವಶಕ್ಕೆ ಪಡೆದು ಜಿಲ್ಲಾ ನ್ಯಾಯಾಲಯದಲ್ಲಿ 200 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ರಾಮದಾಸ್- ಪ್ರೇಮಕುಮಾರಿ ನಡೆಸಿರುವ ಸಂಭಾಷಣೆ ಒಳಗೊಂಡ ಸಿ.ಡಿ ಪರಿಶೀಲಿಸಿರುವ ವಿಧಿ ವಿಜ್ಞಾನ ಪ್ರಯೋಗಾಲಯ ಅದರಲ್ಲಿರುವ ಧ್ವನಿ ರಾಮದಾಸ್ ಅವರದ್ದೇ ಎಂದು ದೃಢಪಡಿಸಿದೆ ಎನ್ನಲಾಗಿದೆ.

‘ಸೈಟು, ಹಣ ಪಡೆದ ವಿಚಾರಕ್ಕೆ ಸಂಬಂಧಿಸಿ ದಂತೆ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ನಾನು ರಾಮದಾಸ್ ಪತ್ನಿ ಯಾಗಿದ್ದು ಬ್ಲಾಕ್​ವೆುೕಲ್ ಪ್ರಶ್ನೆಯೇ ಉದ್ಭವಿ ಸದು ಎಂದು ಪ್ರೇಮಕುಮಾರಿ ಹೇಳಿದ್ದಾರೆ.

Write A Comment