ಮುಂಬಯಿ: ಪುಣೆಯ ಉಗ್ರ ನಿಗ್ರಹ ದಳ ಎಸಿಪಿ ಭಾನು ಪ್ರತಾಪ್ ಬರ್ಗೆ ಹಾಗೂ ಅವರ ಕುಟುಂಬವನ್ನು ನಾಶ ಮಾಡುವುದಾಗಿ ಇಸಿಸ್ ಸಂಘಟನೆಯಿಂದ ಮುಂಬಯಿ ಪೊಲೀಸ್ ಆಯುಕ್ತರಿಗೆ ಬೆದರಿಕೆ ಪತ್ರ ಬಂದಿದೆ.
ಪುಣೆಯ 16 ವರ್ಷದ ಬಾಲಕಿ ಇಸಿಸ್ ಸಂಘಟನೆ ಸೇರಲು ತೆರಳುತ್ತಿದ್ದ ವೇಳೆ ಆಕೆಯನ್ನು ತಡೆದ ಉಗ್ರ ನಿಗ್ರಹ ದಳ ವಾಪಸ್ ಕರೆತಂದಿತ್ತು. ಇದರಿಂದ ಆಕ್ರೋಶಗೊಂಡಿರುವ ಇಸಿಸ್ ಸಂಘಟನೆ ಎಟಿಎಸ್ ಕಮಿಷನರ್ ಮತ್ತು ಅವರ ಕುಟುಂಬಸ್ಥರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದೆ.
ಎರಡು ವಾರಗಳ ಹಿಂದೆ ಮುಂಬೈ ಪೊಲೀಸ್ ಆಯುಕ್ತರಿಗೆ ಈ ಪತ್ರ ಬಂದಿದ್ದು, ಈ ಸಂಬಂಧ ಉಗ್ರ ನಿಗ್ರಹ ದಳ ತನಿಖೆ ಆರಂಭಿಸಿದೆ. ಪತ್ರ ಎಲ್ಲಿಂದ ಬಂದಿದೆ, ಯಾರು ಬರೆದಿರಬಹುದು ಎಂಬುದರ ಬಗ್ಗೆ ತನಿಖೆ ಶುರು ಮಾಡಿದೆ.