ಮನೋರಂಜನೆ

ನಟಿಯರು ಉದ್ಯಮಿಗಳ ಬೆನ್ನಿಗೆ ಬೀಳೋದ್ಯಾಕೆ?

Pinterest LinkedIn Tumblr

3sinemaಬಾಲಿವುಡ್‌ ನಟಿಮಣಿಯರು ತಮ್ಮ ಜೊತೆ ಸ್ಕ್ರೀನ್‌ ಶೇರ್‌ ಮಾಡಿಕೊಳ್ಳುವ ನಟರಿಗಿಂತ ಹೆಚ್ಚಾಗಿ ಬ್ಯುಸಿನೆಸ್‌ಮ್ಯಾನ್‌ಗಳನ್ನೇ ವರಿಸುವುದು ಬಹಳ ಹಿಂದಿನಿಂದಲೂ ಇದೆ. ಬಣ್ಣದ ಜಗತ್ತಿನ ಸಿನಿಮಾ ನಟರ ಬದಲಾಗಿ ಬ್ಯುಸಿನೆಸ್‌ಮ್ಯಾನ್‌ಗಳನ್ನೇ ಆಯ್ಕೆ ಮಾಡಿಕೊಂಡ ನಟಿಯರು ಕುರಿತ ಮಾಹಿತಿ ಇಲ್ಲಿದೆ.

ಅಸಿನ್‌: ಬಹುಭಾಷಾ ನಟಿ ಅಸಿನ್‌ ಮೈಕ್ರೊಮ್ಯಾಕ್ಸ್‌ ಸಹ ಸಂಸ್ಥಾಪಕರಾದ ರಾಹುಲ್‌ ಶರ್ಮಾರೊಂದಿಗೆ ಸಪ್ತಪದಿ ತುಳಿಯಲು ತಯಾರಿ ನಡೆಸಿರೋದು ನಿಮಗೆಲ್ಲಾ ಗೊತ್ತೇ ಇದೆ.

ಡಿಂಪಿ ಗಂಗೂಲಿ: ಹಿಂದಿ ಬಿಗ್‌ಬಾಸ್‌ ಸೀಸನ್-8ರ ಸ್ಪರ್ಧಿ ಕಳೆದ ವರ್ಷವಷ್ಟೆ ದುಬೈ ಮೂಲದ ಉದ್ಯಮಿ ರೋಹಿತ್ ರಾಯ್‌ರನ್ನು ವರಿಸಿದ್ದಾರೆ.

ದಿಯಾ ಮಿರ್ಜಾ: ಬಾಲಿವುಡ್‌ನ ಮತ್ತೊಬ್ಬ ನಟಿ ದಿಯಾ ಮಿರ್ಜಾ ಸಹ ಇದೇ ಹಾದಿ ತುಳಿದವರಲ್ಲಿ ಒಬ್ಬಳು. ತಮ್ಮ ಧೀರ್ಘಕಾಲದ ಸ್ನೇಹಿತ ಹಾಗೂ ಉದ್ಯಮಿ ಸಾಹಿಲ್‌ ಸಾಂಘಾ ಅವರನ್ನು ಅಕ್ಟೋಬರ್‌ 18, 2014ರಂದು ದೆಹಲಿಯಲ್ಲಿ ವಿವಾಹವಾದಳು.

ಇಶಾ ಡಿಯೋಲ್‌: ಬಾಲಿವುಡ್‌ ರಂಗೀನ್‌ ದುನಿಯಾದ ಈ ಮತ್ತೊಬ್ಬ ಚೆಲುವೆ ನಟರ ಸಹವಾಸಕ್ಕೆ ಹೋಗದೆ ದೆಹಲಿ ಮೂಲದ ಉದ್ಯಮಿ ಭರತ್‌ ತಖ್ತಾನಿಯನ್ನು 2012ರಲ್ಲಿ ವಿವಾಹವಾದಳು.

ಶಿಲ್ಪಾ ಶೆಟ್ಟಿ: ಮಂಗಳೂರು ಮೂಲದ ಈ ಬೆಡಗಿ ವರಿಸಿದ್ದು ಲಂಡನ್‌ ಮೂಲದ ಉದ್ಯಮಿ ರಾಜ್‌ ಕುಂದ್ರಾ ಅವರನ್ನು. 2009ರಲ್ಲಿ ರಾಜ್‌‌ ಕುಂದ್ರಾರೊಟ್ಟಿಗೆ ಸಪ್ತಪದಿ ತುಳಿದ ಈ ಚೆಲುವೆಗೆ ವಿವಾನ್ ಕುದ್ರಾ ಮಗುವಿದೆ.

ಅಮೃತಾ ಅರೋರಾ: ಇನ್ನೋರ್ವ ನಟಿ ಅಮೃತಾ ಅರೋರಾ ಬಾಡಿ ಬಿಲ್ಡರ್‌ ಶಕೀಲ್‌ ಲಡಾಕ್‌ ಅವರನ್ನು ವರಿಸಿದ್ದಾರೆ. ಇವರ ಪತಿ ಶಕೀಲ್ ಇತ್ತೀಚಿನ ದಿನಗಳಲ್ಲಿ ಉದ್ಯಮಕ್ಕೂ ಕಾಲಿಟ್ಟಿದ್ದಾರೆ.

ರವೀನಾ ಟಂಡನ್‌: ಒಂದು ಕಾಲದಲ್ಲಿ ತನ್ನ ನಟನೆಯ ಮೂಲಕ ಬಾಲಿವುಡ್‌ನಲ್ಲಿ ಹೊಸ ಕ್ರೇಜ್ ಸೃಷ್ಠಿಸಿದ್ದ ರವೀನಾ ಟಂಡನ್‌ ಜೀವನ ಹಂಚಿಕೊಂಡಿದ್ದು ಮಾತ್ರ ಚಿತ್ರ ವಿತರಕ ಅನಿಲ್‌ರೊಟ್ಟಿಗೆ. 2004ಫೆಬ್ರವರಿಯಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತು.

ಆಯೇಷಾ ಟಾಕಿಯಾ: ಹಿರಿತೆರೆಗಿಂತ ಕಿರುತೆರೆಯಲ್ಲಿಯೇ ಹೆಚ್ಚು ಜನಪ್ರಿಯತೆ ಗಳಿಸಿದ್ದ ಆಯೇಷಾ ಬಾಲಿವುಡ್‌ನ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ತನ್ನ ಮಾದಕ ಚೆಲುವಿಗೆ ಹೆಸರಾಗಿದ್ದ ಈ ನಟಿ ವರಿಸಿದ್ದು ಮಾತ್ರ ಹೋಟೆಲ್ ಉದ್ಯಮಿ ಫರ್ಹಾನ್ ಅಜ್ಮಿ.

ಜೂಹಿ ಚಾವ್ಲಾ: ತನ್ನ ಮೋಹಕ ನಗುವಿನೊಂದಿಗೆ ಮನಗೆಲ್ಲುವ ಚೆಲುವೆ ಜೂಹಿ ಚಾವ್ಲಾ. ಸ್ಯಾಂಡಲ್‌ವುಡ್ ಮೂಲಕ ಕರಿಯರ್ ಆರಂಭಿಸಿ ಬಾಲಿವುಡ್‌ನಲ್ಲಿ ಮಿಂಚಿದ ಈ ಚೆಲುವೆ ಉದ್ಯಮಿ ಜಯ್ ಮೆಹ್ತಾರನ್ನು ವರಿಸಿದ್ದಾರೆ.

Write A Comment