
ಮಂಡ್ಯ.ಡಿ.21: ಮಕ್ಕಳಾಗಲಿಲ್ಲ ಎಂದು ಗಂಡ ಮತ್ತು ಅತ್ತೆಯ ಕಿರುಕುಳದಿಂದ ಬೇಸತ್ತ ಗೃಹಿಣಿಯೊರ್ವಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿ ಹೊಸೂರು ಗ್ರಾಮದಲ್ಲಿ ನಡೆದಿದೆ.
ಬಿ ಹೊಸೂರು ಗ್ರಾಮದ ಯೋಗೇಶ್ ಎಂಬುವವರ ಪತ್ನಿ ಸೌಮ್ಯ(26) ಎಂಬಾಕೆಯೇ ಸಾವಿಗೆ ಶರಣಾದ ದುರ್ದೈವಿ ಗೃಹಿಣಿ. ಕಳೆದ 5 ವರ್ಷಗಳ ಹಿಂದೆ ವಿವಾಹವಾದ ಸೌಮ್ಯಳಿಗೆ ಇಲ್ಲಿಯ ತನಕ ಮಕ್ಕಳಾಗಲಿಲ್ಲ ಎಂದು ಗಂಡ ಮತ್ತು ಅತ್ತೆ ಕಿರುಕುಳ ನೀಡುತ್ತಿದ್ದರೆನ್ನಲಾಗಿದೆ. ಇದರ ಜೊತೆಗೆ ಮದುವೆಯಾದಗಿನಿಂದಲೂ ವರದಕ್ಷಿಣೆ ಕಿರುಕುಳ ನೀಡುತ್ತಿದ್ದನು ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.
ನಿನ್ನೆ ಸಂಜೆ ಸೌಮ್ಯ ಈ ಜಂಜಾಟದಿಂದ ಬೇಸತ್ತು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದಳು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಸೌಮ್ಯಳನ್ನು ಕೂಡಲೆ ಮೈಸೂರಿನ ಕೆ ಆರ್ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫರಕಾರಿಯಾಗದೆ ಇಂದು ಮುಂಜಾನೆ ಸಾವನ್ನಪ್ಪಿದಳು. ಇದೊಂದು ಕೊಲೆ ಎಂದು ಮೃತಳ ಪೋಷಕರು ಕೆರೆಗೂಡು ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಗಂಡ ಯೋಗೇಶ್, ಅತ್ತೆ ತಲೆಮರೆಸಿಕೊಂಡಿದ್ದು ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.